ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಂತಿರುವ ಬಗ್ಗೆ ಗೊತ್ತಿದೆ.
ಸಿನಿಮಾರಂಗದವರು ಕುಟುಂಬದವರು ಎನ್ನುತ್ತೀರಿ.ಆದರೆ, ನಿಖಿಲ್ ಪರ ಪ್ರಚಾರ ಏಕಿಲ್ಲ ಎಂಬ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ದರ್ಶನ್, ಒಂದು ಕ್ಷೇತ್ರದಲ್ಲಿ ಇಬ್ಬರ ಪರ ಪ್ರಚಾರ ಮಾಡಲು ಆಗುವುದಿಲ್ಲ. ಅಮ್ಮನ ಪರ ಫುಲ್ ಟೈಮ್ ಕೆಲಸ ಮಾಡ್ತೀನಿ ಎಂದು ಹೇಳಿದರು.
ಆದರೆ, ಪ್ರಜ್ವಲ್ ಅವರು ಕೂಡ ನನ್ನ ಸ್ನೇಹಿತರೇ ಅವರ ಕರೆದರೆ ಹಾಸನದಲ್ಲಿ ಅವರ ಪರ ಪ್ರಚಾರ ಮಾಡುತ್ತೇನೆ ಎಂದರು.
ಸುಮಲತಾ ಅವರ ಪರ ಪ್ರಚಾರ ಮಾಡುತ್ತಿರುವುದರಿಂದ ನಿಖಿಲ್ ಪರವೂ ಪ್ರಚಾರ ಮಾಡಲು ಆಗುವುದಿಲ್ಲ ಎಂಬ ಕಾರಣಕ್ಕೆ ದರ್ಶನ್ ಹಾಸನದಲ್ಲಿ ಪ್ರಜ್ವಲ್ ಪರವಾದ್ರೆ ಓಕೆ ನಿಖಿಲ್ ಆದ್ರೆ ಮಂಡ್ಯದಲ್ಲಿ ಪ್ರಚಾರ ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಜ್ವಲ್ ಪರ ಪ್ರಚಾರಕ್ಕೆ ಓಕೆ ಅಂದ ದರ್ಶನ್ ನಿಖಿಲ್ ಪರ ಪ್ರಚಾರ ಸಾಧ್ಯ ಇಲ್ಲ ಎಂದಿದ್ದೇಕೆ?
Date: