Home ಎಲ್ಲೆಲ್ಲಿ ಏನೇನು.? ದೇವೇಗೌಡ್ರಿಗಾಗಿ ಮೊಮ್ಮಗ ಪ್ರಜ್ವಲ್ ಅದೆಂಥಾ ತ್ಯಾಗ ಮಾಡಲು ಹೊರಟಿದ್ದಾರೆ?

ದೇವೇಗೌಡ್ರಿಗಾಗಿ ಮೊಮ್ಮಗ ಪ್ರಜ್ವಲ್ ಅದೆಂಥಾ ತ್ಯಾಗ ಮಾಡಲು ಹೊರಟಿದ್ದಾರೆ?

0
ದೇವೇಗೌಡ್ರಿಗಾಗಿ ಮೊಮ್ಮಗ ಪ್ರಜ್ವಲ್ ಅದೆಂಥಾ ತ್ಯಾಗ ಮಾಡಲು ಹೊರಟಿದ್ದಾರೆ?

ಲೋಕಸಭಾ ಚುನಾವಣೆಯಲ್ಲಿ ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂಬುದು ಅಧಿಕೃತವಾಗಿ ಘೋಷಣೆಯಾಗಿದೆ.‌ ಪ್ರಜ್ವಲ್ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಆದರೆ ಅವರು ತನ್ನ ತಾತ ದೇವೇಗೌಡರಿಗಾಗಿ ಕ್ಷೇತ್ರವನ್ನೆ ತ್ಯಾಗ ಮಾಡಲು ಹೊರಟಿದ್ದಾರೆ ಎಂದು ತಿಳಿದುಬಂದಿದೆ.
ಹಾಸನದಿಂದ 5 ಬಾರಿ ಗೆದ್ದಿರುವ ಮಾಜಿ ಪ್ರಧಾನಿ ದೇವೇಗೌಡರು ಈ ಬಾರಿ ಮೊಮ್ಮಗ ಪ್ರಜ್ವಲ್ ಗೆ ಹಾಸನ ಬಿಟ್ಟುಕೊಟ್ಟಿದ್ದರು‌.‌ ಅವರು ಬೆಂಗಳೂರು ಉತ್ತರ ಅಥವಾ ತುಮಕೂರಿನಲ್ಲಿ ಸ್ಪರ್ಧಿಸುವ ಮನಸ್ಸು ಮಾಡಿದ್ದರು. ಆದರೆ , ಈ ಎರಡು ಕಡೆಗಳಲ್ಲಿ ಗೊಂದಲ ಇರುವುದರಿಂದ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಅವರು ಹಾಸನದಿಂದಲೇ ಸ್ಪರ್ಧಿಸುತ್ತಾರೆ ಎಂದು ತಿಳಿದುಬಂದಿದೆ ಎಂದು ಖಾಸಗಿ ಚಾನಲ್ ಗಳಲ್ಲಿ ವರದಿಯಾಗುತ್ತಿದೆ.

LEAVE A REPLY

Please enter your comment!
Please enter your name here