ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಸುಮಲತಾ ಅಂಬರೀಶ್ ನಿನ್ನೆ (ಮಾರ್ಚ್ 20) ಮಂಡ್ಯದ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಸುಮಲತಾ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದು,
ಸುಮಲತಾ ಬಳಿ ಇರುವ ಆಸ್ತಿಯ ವಿವರ ಬಹಿರಂಗವಾಗಿದೆ. ಸುಮಲತಾ ಅವರ ರಾಜಕೀಯ ಪ್ರವೇಶದಿಂದ ಈ ಎಲ್ಲ ಮಾಹಿತಿಗಳು ಅಧಿಕೃತವಾಗಿ ಘೋಷಣೆಯಾಗಿದ್ದು. ಸ್ವತಃ ಸುಮಲತಾ ಅವರೇ ಪ್ರಕಟಿಸಿರುವ ಪ್ರಕಾರ, ಒಟ್ಟು 23.4 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಇನ್ನು ಅಚ್ಚರಿಯ ವಿಷಯ ಅಂದ್ರೆ, ಸುಮಲತಾ ಅವರು ಅಷ್ಟೆ ದೊಡ್ಡ ಮೊತ್ತದ ಸಾಲವನ್ನ ಕೂಡ ಹೊಂದಿದ್ದಾರೆ. ಹಾಗಿದ್ರೆ, ಸುಮಲತಾ ಹೊಂದಿರುವ ಆಸ್ತಿಯೆಷ್ಟು ಮತ್ತು ಸಾಲವೆಷ್ಟು ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ.
ಸುಮಲತಾ ಹೊಂದಿರುವ ಸ್ಥಿರಾಸ್ತಿಯ ವಿವರ
17.72 ಕೋಟಿ ಸ್ಥಿತಾಸ್ತಿಯನ್ನು ಹೊಂದಿರುವ ಸುಮಲತಾ ಅವರು ನಾಮಪತ್ರ ಸಲ್ಲಿಸಿರುವ ವೇಳೆ ನೀಡಿರುವ ಮಾಹಿತಿ ಪ್ರಕಾರ, ಸುಮಾರು 17.72 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ ಮೌಲ್ಯ : 17,72,91,150 ರೂ ಆಗಿದೆ.
ಸುಮಲತಾ ಹೊಂದಿರುವ ಚರಾಸ್ತಿಯ ವಿವರ
5.6 ಕೋಟಿ ಚರಾಸ್ತಿಯನ್ನು ಹೊಂದಿರುವ ಸುಮಲತಾ ಎಚ್ ಡಿಎಫ್ ಸಿ, ಸಿಟಿ ಬ್ಯಾಂಕ್, ಎಸ್ ಬಿಐ ಬ್ಯಾಂಕ್ ಗಳಲ್ಲಿ ಖಾತೆಗಳಿಂದ 12,70,363 ರು ನಗದು ಹೊಂದಿದ್ದಾರೆ. ವಿಜಯ ಬ್ಯಾಂಕ್ ಷೇರು ,ಎಚ್ ಡಿ ಎಫ್ ಸಿ ಈಕ್ವಿಟಿ, ಎಚ್ ಡಿ ಎಫ್ ಸಿ ಯುಲಿಪ್, ವಿಮೆ, ಕೋಟಕ್ ಮಹೀಂದ್ರಾ ವಿಮೆ ಹೊಂದಿದ್ದಾರೆ.
ಸುಮಲತಾ ಬಳಿ ಇರುವ ಚಿನ್ನ-ಬೆಳ್ಳಿ ವಿವರ
1,66,81,189 ಮೌಲ್ಯದ ಚಿನ್ನ, 12,57,545 ರು ಮೌಲ್ಯದ ಬೆಳ್ಳಿಯನ್ನು ಸಹ ಸುಮಲತಾ ಹೊಂದಿದ್ದಾರೆ.
ಸುಮಲತಾ ಹೊಂದಿರುವ ಒಟ್ಟು ಸಾಲ : 14 ಕೋಟಿ
ಪ್ರಮೀಳಾ ಕೆ.ಜಿ ಎನ್ನುವವರ ಬಳಿಯಲ್ಲಿ 45,00,000 ಸಾಲ
ಸಂತೋಷ್ ಡಿ.ಟಿ ಎನ್ನುವವರ ಬಳಿಯಲ್ಲಿ 95,00,000 ಸಾಲ
ಸ್ಯಾಂಡಲ್ ವುಡ್ ಮೀಡಿಯಾ ಬಳಿಯಲ್ಲಿ 2,32,295 ಸಾಲವನ್ನು ಹೊಂದಿರುವುದಾಗಿ ಸುಮಲತಾ ತಿಳಿಸಿದ್ದಾರೆ.
ಅಲ್ಲದೆ 2017-18ರ ಅರ್ಥಿಕ ವರ್ಷದ ಐಟಿ ರಿಟರ್ನ್ಸ್ ನಲ್ಲಿ 1,33,15,757 ರೂ ಆದಾಯವನ್ನಾಗಿ ಸುಮಲತಾ ತೋರಿಸಿದ್ದಾರೆ. ಇದುವರೆಗೂ ಗೌಪ್ಯವಾಗಿದ್ದ ಸುಮಲತಾ ಅವರ ಆಸ್ತಿ ಚುನಾವಣಾ ಕಾರಣದಿಂದಾಗಿ ಇದೀಗ ಬಹಿರಂಗವಾಗಿದೆ.