78ರ ಹರೆಯದ ಶಾರದಾ ಅವರು ನಟಿಸುವುದನ್ನು ಬಿಟ್ಟ ಬಳಿಕ ಸಾಕ್ಷ್ಯಚಿತ್ರ ನಿರ್ದೇಶನ ಮಾಡುತ್ತಲಿದ್ದರು. ಕಳೆದ ಕೆಲವು ಸಮಯದಿಂದ ಅವರು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು.ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ನಟಿ ಎಲ್.ವಿ. ಶಾರದಾ ಅವರು ಗುರುವಾರ ಬೆಳಗ್ಗೆ ನಿಧನರಾದರು.
ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿ, ತನ್ನ ಮೊದಲ ಚಿತ್ರದಲ್ಲೇ ಶ್ರೇಷ್ಠನಟಿ ರಾಜ್ಯ ಪ್ರಶಸ್ತಿ ಪಡೆದಿದ್ದರು. ಫಣಿಯಮ್ಮ ಚಿತ್ರವು ಅವರಿಗೆ ಖ್ಯಾತಿ ತಂದಿತ್ತು.
ಬೂತಯ್ಯನ ಮಗ ಅಯ್ಯು, ವಾತ್ಸಲ್ಯ, ಆದಿ ಶಂಕರಾಚಾರ್ಯ, ಮಧ್ವಾಚಾರ್ಯ, ನಕ್ಕಳಾ ರಾಜಕುಮಾರಿ ಮೊದಲಾದ ಹಲವಾರು ಚಿತ್ರಗಳಲ್ಲಿ ಅವರು ನಟಿಸಿದ್ದರು.