ನಟಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಎಂದು ನಂಬಿದ್ದ ಶಿಲ್ಪಾ ಶೆಟ್ಟಿ ಅಭಿಮಾನಿಗಳಿಗೆ ಇದ್ದಕ್ಕಿಂದ್ದಂತೆ ಶಾಕ್ ಕಾದಿತ್ತು. ಮಾಧ್ಯಮಗಳಲ್ಲಿ ಪ್ರಕಟವಾದ ಶಿಲ್ಪಾ ಹಾಗೂ ರಾಜ್ ಕುಂದ್ರಾ ನಡುವೆ ವಿಚ್ಛೇದನ ಎಂಬ ಸುದ್ದಿಯ ಅಂತೆ ಕಂತೆಗಳು ಕೇವಲ ಅಭಿಮಾನಿಗಳು ಮಾತ್ರವಲ್ಲ ಅವರ ಕುಟುಂಬ ಸದಸ್ಯರಲ್ಲೂ ಗೊಂದಲವನ್ನುಂಟು ಮಾಡಿತ್ತಂತೆ.
ಇದಕ್ಕೆ ಕಾರಣ ಶಿಲ್ಪಾ ಹಾಗೂ ರಾಜ್ ಕುಂದ್ರಾ ನಡುವೆ ಎಲ್ಲವೂ ಸರಿಯಾಗಿಯೇ ಇದೆ. ಇವರಿಬ್ಬರದ್ದು ಅನ್ಯೋನ್ಯ ದಾಂಪತ್ಯ.ಇಷ್ಟಿದ್ದರೂ ಯಾಕಪ್ಪಾ ಇವರಿಬ್ಬರು ಪರಸ್ಪರ ದೂರವಾಗಲು ನಿರ್ಧರಿಸಿದ್ದಾರೆ ಎಂಬುದು ಮನೆಮಂದಿಯ ಆತಂಕವಾಗಿತ್ತಂತೆ. ರಾಜ್ ಕುಂದ್ರಾ ಹಾಗೂ ಶಿಲ್ಪಾ ನಡುವೆ ಭಾರಿ ಜಗಳವಾಗಿದ್ದು, ಈ ಕಾರಣದಿಂದ ಶಿಲ್ಪಾ ಶೆಟ್ಟಿ ತಾನು ಪತಿಯಿಂದ ದೂರವಾಗಲು ನಿರ್ಧರಿಸಿದ್ದಾಗಿ ತನ್ನ ತಾಯಿಗೆ ಸಂದೇಶವನ್ನು ಕಳುಹಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
ಲ ಶಿಲ್ಪಾ ಶೆಟ್ಟಿ ತಾಯಿಯ ಹೃದಯವೇ ನಿಂತ ಅನುಭವವಾಗಿತ್ತಂತೆ. ಬಳಿಕ ಇದೊಂದು ಪ್ರಾಂಕ್ ಎಂಬುದು ತಿಳಿದು ಅವರು ನಿರಾಳರಾಗಿದ್ದಾರೆ ಎನ್ನಲಾಗಿದೆ.
ರಿಯಾಲಿಟಿ ಕಾರ್ಯಕ್ರಮವೊಂದರ ಜಡ್ಜ್ ಕೂಡ ಆಗಿರುವ ಶಿಲ್ಪಾ ಶೆಟ್ಟಿಗೆ ಅವರ ಸಹಪಾಠಿ ಅನುರಾಗ್ ಬಸು ಈ ರೀತಿಯ ಪ್ರಾಂಕ್ ಮಾಡಿದ್ದಾರೆ. ತಮಾಷೆಗಾಗಿ ಅನುರಾಗ್ ಬಸು ಶಿಲ್ಪಾ ಶೆಟ್ಟಿ ಮೊಬೈಲ್ ನಿಂದ ಅವರ ತಾಯಿ ಸುನಂದಾ ಶೆಟ್ಟಿಗೆ ನಾನು ರಾಜ್ ಕುಂದ್ರಾರಿಂದ ವಿಚ್ಛೇದನ ಪಡೆಯುತ್ತಿದ್ದೇನೆ ಎಂದು ಸಂದೇಶವನ್ನು ಕಳುಹಿಸಿದ್ದಾರೆ. ಈ ಸಂದೇಶ ನೋಡಿದ ಸುನಂದಾ ಶೆಟ್ಟಿ ಕ್ಷಣಕಾಲ ಭಯಭೀತರಾಗಿದ್ದರಂತೆ. ಕೂಡಲೇ ಅನುರಾಗ್ ಕೈಯಿಂದ ಮೊಬೈಲ್ ಪಡೆದ ಶಿಲ್ಪಾ, ತಮ್ಮ ಸೆಟ್ ನಲ್ಲಿ ಗೀತಾ ಕಪೂರ್ ಹಾಗೂ ಅನುರಾಗ್ ಬಸು ತಮಾಷೆಗಾಗಿ ಈ ರೀತಿ ಮಾಡಿದ್ದಾರೆ ಎಂದು ಇಡೀ ಘಟನೆಯ ವಿವರ ನೀಡಿದ್ದರಂತೆ. ಬಳಿಕವಷ್ಟೇ ಅವರ ತಾಯಿ ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಯಿತಂತೆ