12ನೇ ಆವೃತ್ತಿ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು ಮಾಡುವುದಾಗಿ ಈ ಹಿಂದೆಯೆ ಬಿಸಿಸಿಐ ಘೋಷಣೆಯನ್ನು ಮಾಡಿತ್ತು ಇದೀಗ ಅದರಂತೆ ನಡೆದುಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಉದ್ಘಾಟನಾ ಸಮಾರಂಭವನ್ನು ರದ್ದು ಮಶಾಡುವುದರ ಮೂಲಕ ಈ ಹಣವನ್ನು ಭಾರತೀಯ ಸೇನೆಗೆ ನೀಡುವುದಾಗಿ ಇದೀಗ ಘೋಷಿಸಿದೆ. ಹೀಗಾಗಿ ಬಿಸಿಸಿಐ ಉದ್ಘಾಟನಾ ಸಮಾರಂಭದ 20 ಕೋಟಿ ರೂಪಾಯಿ ಹಣವನ್ನು ಇದೀಗ ಭಾರತೀಯ ಸೇನೆಗೆ ನೀಡಲಿದೆ.
ಉದ್ಘಾಟನಾ ಸಮಾರಂಭದ 20 ಕೋಟಿ ರೂಪಾಯಿ ಹಣವನ್ನು ಭಾರತೀಯ ಸೇನೆ, CRPF, ಭಾರತೀಯ ವಾಯು ಹಾಗೂ ಭಾರತೀಯ ನೌಕಾಪಡೆಗೆ ಬಿಸಿಸಿಐ ಹಂಚಲಿದೆ.
ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಭಾರತೀಯ CRPF ಯೋಧರ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. ಈ ದಾಳಿಯಲ್ಲಿ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದರು. ಇದೇ ಕಾರಣಕ್ಕೆ ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು ಮಾಡಲು ಬಿಸಿಸಿಐ ನಿರ್ಧರಿಸಿತು.