12ನೇ ಆವೃತ್ತಿ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17.1 ಓವರ್‌ಗಳಲ್ಲಿ 70 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ CSK ಗೆಲುವಿಗೆ 71 ರನ್ ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ RCB ಆರಂಭದಲ್ಲೇ ಅಘಾತವನ್ನು ಅನುಭವಿಸಿತ್ತು ನಾಯಕ ವಿರಾಟ್ ಕೊಹ್ಲಿ ಹಾಗೂ ಪಾರ್ಥೀವ್ ಪಟೇಲ್ ಜೋಡಿ ಮೊದಲ ವಿಕೆಟ್‌ಗೆ ಕೇವಲ 16 ರನ್ ಗಳನ್ನು ಕಲೆಹಾಕಿತ್ತು. ಅಷ್ಟರಲ್ಲೇ ಕೊಹ್ಲಿ 6 ರನ್ ಸಿಡಿಸಿ ಪೆಲಿಯನ್ ಸೇರಿದರೆ ಮೊಯಿನ್ ಆಲಿ 9 ರನ್ ಗಳಿಸಿ ಫೆವಿಲಿಯನ್ ಸೇರಿದ್ರು, ಇನ್ನು ಎಬಿ ಡಿವಿಲಿಯರ್ಸ್ 9 ರನ್‌ಗಳಿಸಿ ಔಟ್ ಆಗುವ ಮೂಲಕ ತಂಡದ ಬ್ಯಾಟಿಂಗ್ ಕ್ರಮಾಂಕ ಸಂಪೂರ್ಣ ನೆಲಕಚ್ಚುವಂತೆ ಮಾಡಿದ್ರು.
ಇನ್ನು ಶಿಮ್ರೊನ್ ಹೆಟ್ಮೆಯರ್ ಡಕ್ ಔಟ್ ಆದ್ರೆ ಶಿವಂ ದುಬೆ 2, ಕೊಲಿನ್ ಡಿ ಗ್ರ್ಯಾಂಡ್‌ಹೊಮ್ 4, ನವದೀಪ್ ಸೈನಿ 2 ಹಾಗೂ ಚಹಾಲ್ 4 ರನ್ ಗಳಿಸಿ ಔಟಾದರು. ಆರಂಭಿಕ ಪಾರ್ಥೀವ್ ಪಟೇಲ್ ಏಕಾಂಗಿ ಹೋರಾಟ ನಡೆಸುವುದರ ಮೂಲಕ 29 ರನ್ ಗಳಿಸಿದ್ರು. ಇದರೊಂದಿಗೆ RCB ತಂಡ 17.1 ಓವರ್‌ಗಳಲ್ಲಿ 70 ರನ್‌ಗೆ ಆಲೌಟ್ ಆಗಿದೆ.