ಮೇಘನಾ ಗುಲ್ಜಾರ್ ನಿರ್ದೇಶದನ ಆಸಿಡ್ ದಾಳಿಗೊಳಗಾದ ಮಹಿಳೆ ಕಥೆ ಆಧಾರಿತ ಚಪಾಕ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಆಸಿಡ್ ದಾಳಿಗೊಳಗಾದ ಮಹಿಳೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ತಿದ್ದಾರೆ. ಇಂದಿನಿಂದ ಚಿತ್ರದ ಶೂಟಿಂಗ್ ಶುರುವಾಗಲಿದ್ದು, ಚಿತ್ರ ಮುಂದಿನ ವರ್ಷ ಜನವರಿಯಲ್ಲಿ ತೆರೆಗೆ ಬರಲಿದೆ.
ದೀಪಿಕಾ ಫಸ್ಟ್ ಲುಕ್ ಟ್ವೀಟರ್ ನಲ್ಲಿ ಹಾಕಿ, ಬಿಡುಗಡೆ ದಿನಾಂಕದ ಬಗ್ಗೆ ಟ್ವಿಟ್ ಮಾಡಿದ್ದಾರೆ. ಚಿತ್ರದ ಶೂಟಿಂಗ್ ಇಂದಿನಿಂದ ಶುರುವಾಗಿದೆ. 2020, ಜನವರಿ 10 ರಂದು ಚಿತ್ರ ತೆರೆಗೆ ಬರ್ತಿದೆ ಎಂದು ದೀಪಿಕಾ ಟ್ವಿಟ್ ಮಾಡಿದ್ದಾರೆ. ಚಿತ್ರದಲ್ಲಿ ದೀಪಿಕಾ, ಲಕ್ಷ್ಮಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ದೀಪಿಕಾ ಈ ಫೋಟೋವನ್ನು ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ದೀಪಿಕಾ ಫೋಟೋ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.