ಶಾಸಕ ಮುನಿರತ್ನ ಇಂದು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡಿದ್ರು. ನಿಖಿಲ್ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮುನಿರತ್ನ, ಇವತ್ತು ಸುವರ್ಣಾಕ್ಷರದಲ್ಲಿ ಬರೆಯುವ ದಿನ. ಎಂದು ಹೇಳಿದ್ರು ನಂತರ ನೆರೆದಿದ್ದ ಜನರನ್ನು ಪ್ರಶ್ನೆ ಮಾಡಿದ ಮುನಿರತ್ನ ನಿಮಗೊಂದು ಪ್ರಶ್ನೆ ಕೇಳ್ತೀನಿ, ನಿಖಿಲ್ ಕುಮಾರಸ್ವಾಮಿಗಿಂತ ಮಂಡ್ಯಕ್ಕೆ ಬೇರೆ ಅಭ್ಯರ್ಥಿ ಬೇಕಾ? ಎಂದು ಪ್ರಶ್ನಿಸುವುದರ ಮೂಲಕ ನಿಖಿಲ್ ಬೇಕು ಅಂತ ಶಪಥ ಮಾಡಿ ಅಂತ ಜನರಿಗೆ ಮನವಿ ಮಾಡಿದ್ರು.
ನಿಖಿಲ್ ಅವರನ್ನ ನಾನು ತುಂಬಾ ಹತ್ತಿರದಿಂದ ನೋಡಿದ್ದೀನಿ. ಸುಳ್ಳು ಕಪಟ ಏನೂ ಗೊತ್ತಿಲ್ಲದ ಮುಗ್ಧ ಮನಸ್ಸಿನ ಹುಡುಗ, ಇಂಥ ಹುಡುಗನನ್ನ ಗೆಲ್ಲಿಸಿ, ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ 5 ವರ್ಷ ಸಿಎಂ ಆಗಿರ್ತಾರೆ ಮಂಡ್ಯದ ಅಭಿವೃದ್ಧಿಗೆ ಸಹಕರಿಸ್ತಾರೆ ನೆನಪಿಟ್ಟುಕೊಳ್ಳಿ ಎಂದರು. ನಂರತ ಅಂಬರೀಷ್ ಬಗ್ಗೆ ಮಾತನಾಡಲು ಆರಂಭಿಸಿದ ಮುನಿರತ್ನ ಅಂಬಿ ಅಂತ್ಯ ಸಂಸ್ಕರಾದ ಗುಟ್ಟು ಬಿಚ್ಚಿಟ್ಟರು.
ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನರಾದಾಗ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲು ಸರ್ಕಾರದಿಂದ ಜಾಗ ನಿಗದಿಪಡಿಸಲಾಯಿತು ಆದ್ರೆ ಸ್ಟುಡಿಯೋದಲ್ಲಿ ಎಲ್ಲಿ ಮಾಡುವುದು ಎಂಬ ಗೊಂದಲ ಎಲ್ಲರಲ್ಲೂ ಕಾಡಿತ್ತು ಅಂದು ರಾತ್ರಿ 2 ಗಂಟೆಗೆ ನಾನು ನಿಖಿಲ್ ಜೊತೆಗೇ ಇದ್ದೆ. ಆಗ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸಮಾಧಿಗೆ ಜಾಗ ಗುರುತಿಸಿದ್ದು ಬೇರೆ ಯಾರೂ ಅಲ್ಲ ಇದೇ ನಿಖಿಲ್..! ಪ್ರಮಾಣ ಮಾಡಿ ಹೇಳ್ತೀನಿ ಇದು ಸತ್ಯ ಎಂದು ಮುನಿರತ್ನ ಮಂಡ್ಯ ಜನರ ಮುಂದೆ ಹೇಳಿದ್ದಾರೆ. ಈ ಮೂಲಕ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಅವರಿಗೆ ನನ್ನ ಬೆಂಬಲ ಇಲ್ಲ ಎಂದು ಮುನಿರತ್ನ ಮಾಹಿತಿ ರವಾನಿಸಿದರು.