ಬ್ಯಾನರ್ ನ ಮೊದಲ ಸಿನಿಮಾ ‘ಕವಲು ದಾರಿ’ ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಹ ಸಿಕ್ಕಿದೆ. ಈಗಾಗಲೇ ಚಿತ್ರದ ಕೆಲವೊಂದು ಹಾಡುಗಳು ರಿಲೀಸ್ ಕೇಳುಗರ ಮನಸ್ಸನ್ನು ಸೆಳೆದಿವೆ. ಈಗ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ.
ಹೌದು, ಈ ಚಿತ್ರದ ‘ಖಾಲಿ ಖಾಲಿ ಅನಿಸುವ ಕ್ಷಣಕ್ಕೆ’ ಎಂದು ಶುರುವಾಗುವ ಹಾಡು ರಿಲೀಸ್ ಆಗಿದೆ. ಈ ಹಾಡಿನ ವಿಶೇಷವೆಂದರೆ ಅದು ಸುಮನ್ ರಂಗನಾಥ್. ಅವರಿಲ್ಲಿ ಕಡುಗೆಂಪು ಬಣ್ಣದ ಕಾಸ್ಟ್ಯೂಮ್ ಧರಿಸಿ ಮಿರಿಮಿರಿ ಮುಂಚುತ್ತಿದ್ದಾರೆ.
ಅಂದ ಹಾಗೆ ಇದೊಂದು ಕ್ಯಾಬರೇ ಶೈಲಿಯ ಹಾಡಾಗಿದ್ದು, ಸುಮನ್ ರಂಗನಾಥ್ ಸೊಂಟ ಬಳುಕಿಸಿದ್ದಾರೆ. ಈ ಹಾಡನ್ನು ಧನಂಜಯ್ ರಂಜನ್ ಬರೆದಿದ್ದು ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.