ನಟ ಕಿಚ್ಚ ಸುದೀಪ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.
ಮನೆ ಮತ್ತು ತೋಟದ ಮಾಲೀಕ ದೀಪಕ್ ಮಯೂರ್ ಎಂಬುವವರು ಸುದೀಪ್ ವಿರುದ್ಧ ದೂರು ದಾಖಲಿಸಿದ್ದು, ಚಿಕ್ಕಮಗಳೂರು ಜೆಎಂಎಫ್‌ಸಿ ನ್ಯಾಯಾಲಯದಿಂದ ಸುದೀಪ್‌ಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.
ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿಗಾಗಿ, ದೀಪಕ್ ಮನೆ ಮತ್ತು ತೋಟ ಬಾಡಿಗೆಗೆ ನೀಡಿದ್ದು, ಅದರ ಬಾಡಿಗೆ ಹಣ ನೀಡದೇ, ತೋಟ ನಾಶ ಮಾಡಿದ್ದಾರೆಂದು ದೂರು ನೀಡಲಾಗಿತ್ತು. ನಿನ್ನೆ ಸುದೀಪ್ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದ್ರೆ ಸುದೀಪ್ ಹಾಜರಾಗದ ಹಿನ್ನೆಲೆ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಮಾಡಲಾಗಿದೆ.