ಹೌದು ಮಂಡ್ಯ ವಿಧಾನಸಭಾ ಕ್ಷೇತ್ರದ ಮೇಲೆ ರಾಜ್ಯದಲ್ಲಿ ಎಲ್ಲರ ಕಣ್ಣು ಮಂಡ್ಯದ ಮೇಲಿದೆ ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಂಡ್ಯದಲ್ಲಿ ಜೋರಾಗಿ ನಡೀತಾ ಇದೆ . ಒಂದು ಕಡೆ ಸುಮಲತಾ ಪರ ದರ್ಶನ್ ಯಶ್ ನಿಂತಿದ್ದರೆ ನಿಖಿಲ್ ಕುಮಾರಸ್ವಾಮಿ ಕಡೆ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರು ಪ್ರಚಾರ ನಡೆಸ್ತಾ ಇದ್ದಾರೆ .
ಸುಮಾಲತ ಅವರ ಪರ ಚಿತ್ರರಂಗದಲ್ಲಿ ಹಲವಾರು ನಟರು ಗಣ್ಯರು ಬೆಂಬಲವನ್ನು ಸೂಚಿಸಿದ್ದಾರೆ . ಆದರೆ ಸುದೀಪ್ ಯಾಕೆ ಇನ್ನೂ ಮಂಡ್ಯಕ್ಕೆ ಬಂದಿಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು ಇದಕ್ಕೆಲ್ಲ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸ್ವತಃ ಕಿಚ್ಚ ಸುದೀಪ್ ಅವರೇ ಸುಮಲತಾ ಪರ ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದಾರೆ .
ಏಪ್ರಿಲ್ 10 11 12ನೇ ತಾರೀಖಿನಂದು ಮಂಡ್ಯ ಮದ್ದೂರು ಮಳವಳ್ಳಿಯಲ್ಲಿ ಸುದೀಪ್ ಅವರು ಸುಮಲತಾ ಅವರ ಪರ ಪ್ರಚಾರ ಮಾಡ್ತಾರೆ ,ಇದೇ ವಿಚಾರವಾಗಿ ಸುಮಲತಾ ಅಂಬರೀಶ್ ಹಾಗೂ ಸುದೀಪ್ ಅವರು ಪರಸ್ಪರ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ .ದರ್ಶನ್ ಯಶ್ ಹಾಗೂ ಇದೀಗ ಸುದೀಪ್ ಅವರು ಕೂಡ ಪ್ರಚಾರಕ್ಕಿಳಿದಿರುವುದರಿಂದ
ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅವರ ಪರ ಭರ್ಜರಿ ಪ್ರಚಾರ ನಡೀಯುತ್ತದೆ ಎನ್ನಲಾಗುತ್ತಿದೆ,ಇನ್ನೊಂದು ಕಡೆ ಡಿಕೆ ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರು ಕೂಡ ನಿಖಿಲ್ ಕುಮಾರಸ್ವಾಮಿ ಪರ ಭರ್ಜರಿ ಪ್ರಚಾರ ನಡೆಸ್ತಾ ಇದ್ದಾರೆ .