ಚಂದನವನದ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಮಿಂಚಿದ್ದು ತಿಳಿದೇ ಇದೆ.. ಇದೀಗ ಕಾಲಿವುಡ್ ಗೂ ಕಾಲಿಟ್ಟಿದ್ದು ಬಕ್ಕಿಯಾರಾಜ್ ಕಣ್ಣನ್ ಅವರ ನಿರ್ದೇಶನದ ಕಾರ್ತಿ ವಿರುದ್ಧ ನಟಿಸಲು ಇತ್ತೀಚೆಗೆ ಸಹಿ ಹಾಕಿದ್ದಳು.. ಕಾರ್ತಿ ಜೊತೆ ಮೊದಲ ತಮಿಳು ಸಿನಿಮಾಕ್ಕೆ ಸಹಿ ಹಾಕಿದ್ದು ಈಗ ಶಿವಕಾರ್ತಿಕೇಯನ್ ಜೊತೆ ನಟಿಸಲು ಆಫರ್ ಸಿಕ್ಕಿದೆ.
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಯಜಮಾನ ಸಿನಿಮಾದಲ್ಲಿ ಹಳ್ಳಿ ಹುಡುಗಿ ಕಾವೇರಿ ರೋಲ್ನಲ್ಲಿ ಮಿಂಚಿದ್ದರು ರಶ್ಮಿಕಾ..
ರಶ್ಮಿಕಾ, ಈಗ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸ್ತಾಯಿರೋ ‘ಎಸ್‌ಕೆ17’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ಆಫರ್ ಸಿಕ್ಕಿದೆ… ವಿಘ್ನೇಶ್‌ಶಿವನ್ ನಿರ್ದೇಶನದಲ್ಲಿ ಲೈಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ.
ಜುಲೈನಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಕಳೆದ ವಾರ ಖಚಿತಪಡಿಸಿದ್ದಾರೆ. ಅನಿರುದ್ ರವಿಚಂದರ್ ಸಂಗೀತವನ್ನು ಸಂಯೋಜಿಸಲು ತೀರ್ಮಾನಿಸಿದ್ದಾರೆ.