ಏನಿದು? ಶಿವಣ್ಣ 125, ದರ್ಶನ್ 50 , ಪ್ರೇಮ್ 25! ಎಲ್ಲಾದ್ರೂ ಕ್ರಿಕೆಟ್ ಆಡಿದ್ರಾ? ಶಿವಣ್ಣ ಸೆಂಚುರಿ ಬಾರಿಸಿದ್ರಾ? ದರ್ಶನ್ ಹಾಫ್ ಸೆಂಚುರಿ ಬಾರಿಸಿದ್ರಾ?
ಇಲ್ಲ, ಇದು ಅವರುಗಳ ಸಿನಿಮಾ ಕಥೆ!
ಈವರ್ಷ ಈ ನಟರು ತಮ್ಮ ಸಿನಿ ಜರ್ನಿಯ 50, 25, 125ನೇ ಸಿನಿಮಾಗಳನ್ನು ಪೂರೈಸುತ್ತಿದ್ದಾರೆ. ಕುರುಕ್ಷೇತ್ರ ದರ್ಶನ್ ಅವತ 50ನೇ ಸಿನಿಮಾ. ಇದು ಈ ವರ್ಷ ರಿಲೀಸ್ ಆಗುತ್ತಿದೆ. ದರ್ಶನ್ ಈಗ ಒಡೆಯ, ರಾಬರ್ಟ್, ಗಂಡುಗಲಿ ಮದಕರಿ ನಾಯಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಡೆಯ ಚಿತ್ರೀಕರಣ ಆಗುತ್ತಿದೆ. ಮಂಡ್ಯದಲ್ಲಿ ಸುಮಲತಾ ಅವರ ಪರ ಪ್ರಚಾರದಲ್ಲಿ ಬ್ಯುಸಿ ಇರುವ ಡಿ.ಬಾಸ್ ಬಳಿಕ ಏಪ್ರಿಲ್ 19ರಿಂದ ರಾಬರ್ಟ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಾರೆ.
ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅವರ 125ನೇ ಚಿತ್ರ ಭೈರತಿ ರಣಗಲ್ ಈ ವರ್ಷ ಸೆಟ್ಟೇರಲಿದೆ.
ನೆನಪಿರಲಿ ಪ್ರೇಮ್ ಅವರ 25ನೇ ಚಿತ್ರ ಕೂಡ ಸೆಟ್ಟೇರುತ್ತಿದೆ. ಅದರಲ್ಲಿ ಪ್ರೇಮ್ ಡಬಲ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹರಿಪ್ರಿಯಾ ಅವರ 25 ನೇ ಸಿನಿಮಾ ಡಾಟರ್ ಆಫ್ ಪಾರ್ವತಮ್ಮ ತೆರೆಕಾಣಲಿದೆ.