ಪೊಲೀಸರೆಂದರೆ ಸಾಮಾನ್ಯವಾಗಿ ಆರಡಿ ಇರಬೇಕು, ಆಜಾನುಬಾಹುವಾಗಿರಬೇಕು ಎಂಬ ಕಲ್ಪನೆಗಳಿವೆ. ಅದನ್ನೂ ಮೀರಿಸುವಂಥ ಎತ್ತರದ ಪೊಲೀಸರೊಬ್ಬರಿದ್ದು, ಇವರು ಜಗತ್ತಿನಲ್ಲೇ ಅತಿ ಎತ್ತರದ ಪೊಲೀಸ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಪಂಜಾಬ್‌ನಲ್ಲಿ ಟ್ರಾಫಿಕ್ ಪೊಲೀಸ್ ಆಗಿರುವ ಜಗದೀಪ್ ಸಿಂಗ್ ಅವರ ಎತ್ತರ 7 ಅಡಿ 6 ಇಂಚು. ಇವರ ತೂಕ 190 ಕಿಲೋಗ್ರಾಮ್. ಇನ್ನೂ ವಿಶೇಷವೆಂದರೆ ಇವರ ಸೈಜಿನ ಶೂ ಭಾರತದಲ್ಲೇ ಸಿಗುತ್ತಿಲ್ಲ. 19 ಸೈಜಿನ ಶೂಗಳನ್ನು ಇವರು ವಿದೇಶದಿಂದ ತರಿಸಿಕೊಳ್ಳುತ್ತಿದ್ದಾರೆ.
ಇವೆಲ್ಲ ಜನರಿಗೆ ಅಚ್ಚರಿ ಹಾಗೂ ವಿಶೇಷ ಎನಿಸಿದರೆ ಇವರಿಗೆ ಇವುಗಳೇ ಸಮಸ್ಯೆ ಎನಿಸಿವೆ. ನನಗೆ ಬೇಕಾದ ಉಡುಪು ಸಿಗುತ್ತಿಲ್ಲ, ಸಾಮಾನ್ಯ ವಾಷ್ ರೂಮ್ ಗೆ ನಾನು ಹೋಗಲು ಆಗುವುದಿಲ್ಲ, ಲೋಕಲ್ ಬಸ್-ಕ್ಯಾಬ್‌ಗಳಲ್ಲಿ ನಾನು ಪ್ರಯಾಣಿಸಲು ಆಗುವುದಿಲ್ಲ ಎಂದು ಇವರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.