ಸಿಎಂ ಐಟಿ ದಾಳಿ ನಡೆಯುವ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯದ ಉದ್ಯಮಿ ಹಾಗೂ ಜೆಡಿಎಸ್ ನಾಯಕರ ಮೇಲೆ ಐಟಿ ರೇಡ್ ಆರಂಭವಾಗಿದೆ. ಬುಧವಾರ ರಾತ್ರಿ ಬೆಂಗಳೂರಿನ ಉದ್ಯಮಿಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಗುರುವಾರ ಮುಂಜಾನೆ ಸಚಿವ ಸಿ. ಎಚ್ ಪುಟ್ಟರಾಜು ಹಾಗೂ ಅವರ ಕುಟುಂಬ ಸದಸ್ಯರ ನಿವಾಸಗಳ ಮೇಲೆ ಐಟಿ ರೇಡ್ ನಡೆದಿತ್ತು. ಇದಾದ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಆಪ್ತರ ಮೇಲೂ ದಾಳಿ ಮಾಡಲಾಗಿದೆ.
ಸಿಎಂ ಕುಮರಸ್ವಾಮಿ ಸಹೋದರ ಹಾಗೂ ಲೋಕೋಪಯೋಗಿ ಸಚಿವ ರೇವಣ್ಣ ಆಪ್ತರ ಮೇಲೆ 10 ಕಡೆ ಐಟಿ ಅಧಿಕಾರಿಗಳು ಮಾಡಿದ್ದಾರೆ. ಹೆಚ್ ಡಿ ರೇವಣ್ಣ ಅವರ ಆಪ್ತರಾದ ನಾರಾಯಣ ರೆಡ್ಡಿ, ಅಶ್ವಥ್ ಹಾಗೂ ರಾಯನ ಗೌಡ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಹಾಗೂ ಆದಾಯ ತೆರಿಗೆ ವಂಚನೆಯ ಕುರಿತು ದಾಖಲೆಗಳನ್ನು ಕಲೆಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.