No menu items!
4.8 C
Munich
Saturday, May 2, 2026

ಗೋಕಾಕ್ ನಲ್ಲಿ ‘ನಾಥೂರಾಮ್’..!!! ರಿಷಬ್ ಶೆಟ್ರು!

Must read

ನಿರ್ದೇಶಕ ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟನೆಯತ್ತ ತಮ್ಮ ಗಮನ ಹರಿಸಿದ್ದಾರೆ. ಸದ್ಯ ಅವರು ‘ನಾಥೂರಾಮ್’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಸದ್ಯ ಈ ಚಿತ್ರದ ಶೂಟಿಂಗ್ ಗೋಕಾಕ್ ನಲ್ಲಿ ನಡೆಯುತ್ತಿದೆ.

‘ಬೆಲ್ ಬಾಟಂ’ ಚಿತ್ರದಲ್ಲಿ ರೆಟ್ರೋ ಲುಕ್ ನಲ್ಲಿ ಪಂಚಿಂಗ್ ಡೈಲಾಗ್ ಹೊಡೆದು ಅಭಿಮಾನಿಗಳು ಕುಣಿದು ಕೇಕೆ ಹಾಕುವಂತೆ ಮಾಡಿದ್ದ ಡಿಟೆಕ್ಟಿವ್ ದಿವಾಕರ ಇದೀಗ ‘ನಾಥೂರಾಮ್’ನ ಅವತಾರವೆತ್ತಿದ್ದಾರೆ.

ಅಂದ ಹಾಗೆ ಈ ಚಿತ್ರವನ್ನು ವಿನು ಬಳಂಜ ನಿರ್ದೇಶನ ಮಾಡುತ್ತಿದ್ದು, ಸದ್ಯ ಚಿತ್ರದ ಶೂಟಿಂಗ್ ಗೋಕಾಕ್ ನ ಹಳ್ಳಿಯ ಮನೆಯೊಂದರಲ್ಲಿ ನಡೆಯುತ್ತಿದೆ. ಈ ಚಿತ್ರದ ಮೂಲಕ ನಿರ್ದೇಶಕರು ವಿಭಿನ್ನವಾದ ಕಥೆಯನ್ನು ಹೇಳಲಿದ್ದಾರೆ.
ನಾಥೂರಾಮ್ ಎಂಬುದು ಕಥಾ ನಾಯಕನ ಹೆಸರು. ಆತ ಒಬ್ಬ ಕಾಲೇಜ್ ಲೆಕ್ಚರರ್. ಹಾಗೆಯೇ ಗಾಂಧೀಜಿಯವರ ಪರಮ ಭಕ್ತ, ಅಭಿಮಾನಿ, ಅನುಯಾಯಿ. ಆತನ ಸುತ್ತ ಕಥೆ ಸುತ್ತುತ್ತದೆ. ಹಾಗಂತಾ ನಾಥೂರಾಮ್ ಗೋಡ್ಸೆಗೂ, ಈ ಚಿತ್ರದ ಕಥಾ ನಾಯಕ ನಾಥೂರಾಮ್ ಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ಚಿತ್ರತಂಡ ಈಗಾಗಲೇ ಸ್ಪಷ್ಟಪಡಿಸಿದೆ.

ಇನ್ನು ಚಿತ್ರಕ್ಕೆ ನಾಯಕಿಯಾಗಿ ‘ಮಗಳು ಜಾನಕಿ’ ಸೀರಿಯಲ್ ನ ಗಾನವಿ ಲಕ್ಷ್ಮಣ್ ಆಯ್ಕೆಯಾಗಿದ್ದು, ಉಳಿದಂತೆ ಅನಂತ್​ ನಾಗ್ , ಶಿವಮಣಿ, ಕಿಶೋರ್ , ಶಿವಮಣಿ, ಅಚ್ಯುತ್ ಕುಮಾರ್ ಸೇರಿದಂತೆ ಬಹುತೇಕ ತಾರೆಯರು ಬಣ್ಣಹಚ್ಚಿದ್ದು. ಹೆಚ್.ಕೆ ಪ್ರಕಾಶ್ ಬಂಡವಾಳ ಹೂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article