ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶುಕ್ರವಾರದಂದು ಅವರು ಈ ಮೊದಲು ಬಿಜೆಪಿಯ ಭೀಷ್ಮ, ಲಾಲ್ ಕೃಷ್ಣ ಅಡ್ವಾಣಿ ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದ್ದು, ಮಿತ್ರ ಪಕ್ಷದ ನಾಯಕರು ಈ ವೇಳೆ ಸಾಥ್ ನೀಡಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಅಮಿತ್ ಶಾ ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದು, ಇದರ ಪ್ರಕಾರ ಅವರ ಬಳಿ 38.81 ಕೋಟಿ ರೂಪಾಯಿ ಆಸ್ತಿ ಇದೆ. ಇದರಲ್ಲಿ ಪತ್ನಿ ಬಳಿ ಇರುವ ಆಸ್ತಿಯೂ ಸೇರಿದೆ.
38.81 ಕೋಟಿ ರೂಪಾಯಿ ಆಸ್ತಿ ಪೈಕಿ, 23.45 ಕೋಟಿ ರೂಪಾಯಿ ಪಿತ್ರಾರ್ಜಿತ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 27.80 ಲಕ್ಷ ರೂ. ಇರಿಸಲಾಗಿದ್ದು, 9.80 ಲಕ್ಷ ರೂಪಾಯಿ ನಿಶ್ಚಿತ ಠೇವಣಿ ಇದೆ. ಜೊತೆಗೆ 20,633 ರೂ.ನಗದನ್ನು ಅಮಿತ್ ಶಾ ಹೊಂದಿದ್ದಾರೆ .