ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ದೇಶದ ಆರ್ಥಿಕ ಪ್ರಕ್ಷುಬ್ಧತೆಯಿಂದ ಆತಂಕಗೊಂಡಿದ್ದಾರೆ. ಇಮ್ರಾನ್ ಖಾನ್ ವೈಯಕ್ತಿಕ ಜೀವನವೂ ಸರಿಯಾಗಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಪಾಕಿಸ್ತಾನದ ಪತ್ರಕರ್ತ ನಜಮ್ ಸೇಥಿ, ಇಮ್ರಾನ್ ಖಾನ್ ವೈಯಕ್ತಿಕ ಜೀವನದ ಬಗ್ಗೆ ದಂಗಾಗಿಸುವ ವಿಷ್ಯ ಹೊರಹಾಕಿದ್ದಾರೆ.
ಇಮ್ರಾನ್ ಖಾನ್ ವೈಯಕ್ತಿಕ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಬಿರುಗಾಳಿ ಕಾಣಿಸಿಕೊಂಡಿದೆ. ಇದ್ರಿಂದ ಅವ್ರ ಮೂರನೇ ಮದುವೆ ಕೂಡ ಮುರಿದುಬೀಳಲಿದೆ. ಇಮ್ರಾನ್ ಖಾನ್ ಹಾಗೂ ಮೂರನೇ ಪತ್ನಿ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದರಂತೆ. ಆದ್ರೆ ಆಪ್ತರು ಬುದ್ದಿವಾದ ಹೇಳಿದ್ದಾರೆ ಎನ್ನಲಾಗಿದೆ. ಸದ್ಯ ಇಬ್ಬರ ಸಂಬಂಧ ಬೂದಿ ಮುಚ್ಚಿದ ಕೆಂಡದಂತಿದೆ. ಸಂಬಂಧಿಕರು, ಕುಟುಂಬಸ್ಥರ ಮಾತು ಕೇಳಿ ಇಬ್ಬರೂ ಒಟ್ಟಿಗಿರುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇಮ್ರಾನ್ ಖಾನ್ ಹಾಗೂ ಬುಷ್ರಾ ಕಳೆದ ವರ್ಷ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಕ್ರಿಕೆಟ್ ನಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಇಮ್ರಾನ್ ಖಾನ್ ಈ ಮೊದಲು ಎರಡು ಮದುವೆಯಾಗಿದ್ದರು. ಆದ್ರೆ ಎರಡೂ ಮದುವೆ ವಿಚ್ಛೇದನದಲ್ಲಿ ಕೊನೆಗೊಂಡಿತ್ತು.
65 ವರ್ಷದ ಇಮ್ರಾನ್, 39 ವರ್ಷದ ಬುಷ್ರಾರ ಮುಖ ನೋಡದೆ ಮದುವೆಯಾಗಿದ್ದರಂತೆ. ಅನೇಕ ಬಾರಿ ಇಬ್ಬರ ಭೇಟಿಯಾಗಿತ್ತು. ಆದ್ರೆ ಬುಷ್ರಾ ಮುಖವನ್ನು ಇಮ್ರಾನ್ ನೋಡಿರಲಿಲ್ಲವಂತೆ. ಹಿಂದಿನ ವರ್ಷ ನಾಯಿ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ ಎಂಬ ಸುದ್ದಿ ಪ್ರಸಾರವಾಗಿತ್ತು. ಈಗ ಮತ್ತೆ ಭಿನ್ನಾಭಿಪ್ರಾಯದ ಸುದ್ದಿ ಚರ್ಚೆಗೆ ಬಂದಿದೆ.