ಭಾರತದಲ್ಲಿ ಅಂಬಾಸಿಡರ್ ಕಾರ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ? 90 ರ ದಶಕ ಅಥವಾ ಅದರ ಹಿಂದಿನವರ ಕನಸಿನ ಕಾರೆಂದರೆ ಅದು ಅಂಬಾಸಿಡರ್. ಆದರೆ ಇಂದಿನ ದಿನಮಾನದಲ್ಲಿ ಅದಕ್ಕೆ ಮೌಲ್ಯ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೊಂದು ಅವತರಣಿಕೆಯಲ್ಲಿ ಮಾರುಕಟ್ಟೆಗೆ ಬರಲು ಸಿದ್ಧತೆ ನಡೆಸಿದೆ.
ಹೌದು, ಫ್ರೆಂಚ್ ಮೂಲದ ಪಿಎಸ್‌ಎ ಪಿಯೋಜೆಟ್ ಸಿಟ್ರೋನ್ ಎನ್ನುವ ಆಟೋಮೋಟಿವ್ ಸಂಸ್ಥೆ ಅಂಬಾಸಿಡರ್ ಕಾರನ್ನು ಎಲೆಕ್ಟ್ರಿಕ್ ಎಂಜಿನ್ ನಲ್ಲಿ ಹೊರತರಲು ಸಿದ್ಧತೆ ನಡೆಸಿಕೊಂಡಿದೆ. ಕಂಪನಿ ಇದೇ ಕಾರನ್ನು ಎಸ್‌ಯುವಿ ಶೈಲಿಯಲ್ಲಿ 2022ರ ವೇಳೆಗೆ ಬಿಡುಗಡೆ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.
ಹಿಂದೂಸ್ತಾನ್ ಮೋಟರ್ಸ್ ಹೆಸರಿನಲ್ಲಿದ್ದ ಈ ಕಾರಿನ ಪೇಟೆಂಟ್ ನ್ನು ಇದೀಗ ಫ್ರೆಂಚ್ ಮೂಲದ ಸಂಸ್ಥೆ ತೆಗೆದುಕೊಂಡಿದೆ.ಮೂಲಗಳ ಪ್ರಕಾರ ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಿ ಕಾಮನ್ ವೆಲ್ತ್ ದೇಶಗಳಿಗೆ ಈ ಕಾರು ಬರಲು ಮೂರು ವರ್ಷ ಆಗಲಿದೆ. ಪ್ರಮುಖವಾಗಿ ನಷ್ಟದಲ್ಲಿರುವ ಅಂಬಾಸಿಡರ್ ಸಂಸ್ಥೆಯನ್ನು ಲಾಭದತ್ತ ತರುವ ಉದ್ದೇಶದಿಂದಲೇ ಈ ತಯಾರಿಕೆ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿದೆ.