ಕನ್ನಡ ಚಿತ್ರರಂಗದ ಜನಪ್ರಿಯ, ಕ್ರೀಯಾಶೀಲ ನಿರ್ದೇಶಕರಲ್ಲಿ ಪ್ರೇಮ್ ಸಹ ಒಬ್ಬರು. ಜೋಗಿ ಪ್ರೇಮ್ ಎಂದೇ ಖ್ಯಾತರಾಗಿರುವ ಪ್ರೇಮ್ ಆ್ಯಕ್ಷನ್ ಕಟ್ ಹೇಳುವುದರಲ್ಲಿ ಮಾತ್ರವಲ್ಲ ತಮ್ಮ ಸಿನಿಮಾಕ್ಕೆ ಬೇಕಾದ ಪ್ರಮೋಷನ್ ಮಾಡುವುದರಲ್ಲೂ ಎತ್ತಿದ ಕೈ. ಇದರ ಜೊತೆಗ ಒಬ್ಬ ನಟನಾಗಿಯೂ ಯಶಸ್ಸು ಕಂಡವರು ಪ್ರೇಮ್.
ಕಳೆದ ವರ್ಷ ಇವರು ನಿರ್ದೇಶಿಸಿದ್ದ ದಿ ವಿಲನ್ ಸಿನಿಮಾ ರಿಲೀಸ್ ಆಗಿತ್ತು. ಕರುನಾಡ ಚಕ್ರವರ್ತಿ ಡಾ.ಶಿವರಾಜ್ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ನಟನೆ ದಿ ವಿಲನ್ ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. ವಿಲನ್ ನಿರ್ದೇಶಕ ಪ್ರೇಮ್ ಈಗ ಗಾಂಧಿ ಆಗಿದ್ದಾರೆ.
ಡಿಕೆ ಸಾಹೇಬ ‘ಗಾಂಧಿಗಿರಿ’ ತೋರಿಸಲು ಮುಂದಾಗಿದ್ದಾರೆ, ರಘು ಹಾಸನ್ ನಿರ್ದೇಶನದ ಸಿನಿಮಾ ಗಾಂಧಿಗಿರಿ. ಈ ಸಿನಿಮಾದಲ್ಲಿ ಪ್ರೇಮ್ ನಾಯಕ. ಪ್ರೇಮ್ ಅಮ್ಮನಾಗಿ ಅರುಂಧತಿ ನಾಗ್ ನಟಿಸುತ್ತಿದ್ದಾರೆ. ಯುಗಾದಿ ಹಬ್ಬದ ಈ ಸಮಯದಲ್ಲಿ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು. ಗಾಂಧಿಗಿರಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ.