ಸಿಆರ್ ಪಿಎಫ್ ಸೇನೆಯ ಯೋಧ ರಾಜನಾಯಕ ಎಂಬುವವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಗೆ ವೋಟ್ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇದರ ಜೊತೆಗೆ ನಮ್ಮ ಮಂಡ್ಯ ತುಂಬಾ ಅಭಿವೃದ್ದಿ ಹೊಂದಬೇಕು, ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅದೆಲ್ಲ ನಿಲ್ಲಬೇಕು. ನಮ್ಮ ರೈತರು ಕಷ್ಟದಿಂದ ಹೊರಗೆ ಬರಬೇಕು. ನಮ್ಮಂತ ಯೋಧರ ಕುಟುಂಬಕ್ಕೆ ಒಳ್ಳೆದಾಗಬೇಕು. ಸುಮಲತಾ ಅವರು ಗೆಲ್ಲಬೇಕು..ಎಲ್ಲರೂ ಸುಮಲತಾ ಅವರಿಗೆ ವೋಟ್ ಮಾಡಿ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾರತದಲ್ಲಿ ಗೌಪ್ಯ ಮತದಾನ ಜಾರಿಯಲ್ಲಿದೆ ಹೀಗಾಗಿ ಯೋಧ ಮಾಡಿರುವ ಮತದಾನದ ಪತ್ರವನ್ನು ಚುನಾವಣಾ ಮತ ಎಣಿಕೆ ವೇಳೆಯಲ್ಲಿ ಗಣನೆಗೆ ತೆಗೆದುಕೊಳ್ಳದೆ ಇರುವ ಸಾಧ್ಯತೆ ಹೆಚ್ಚಾಗಿರುತ್ತದೆ, ಇದಲ್ಲದೇ ಸೇನೆ ಕೂಡ ಶಿಸ್ತು ಕ್ರಮ ಜರುಗಿಸಲಾಗುವುದು ಎನ್ನ ಲಾಗಿದೆ ಈ ವಿಷಯ ಈಗ ಚುನಾವಣಾ ಆಯೋಗದ ಅಂಗಳದಲ್ಲಿದೆ