ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಇದ್ದಾರೆ. ನಿಖಿಲ್ ಎದುರಾಳಿಯಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಸವಾಲಾಗಿದ್ದಾರೆ. ಬಿಜೆಪಿ ತನ್ನ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸದೇ ಸುಮಲತಾ ಅಂಬರೀಶ್ ಅವರ ಪರ ಬ್ಯಾಟಿಂಗ್ ನಡೆಸುತ್ತಿದೆ.
ಸುಮಲತಾ ಪರ ಬಿಜೆಪಿ ಇರುವಾಗ ನಿಖಿಲ್ ಅವರನ್ನು ಹಾಡಿ ಹೊಗಳಿದ್ದಾರೆ ಬಿಜೆಪಿ ನಾಯಕಿ..! ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ಕುಮಾರ್ ಬಿಜೆಪಿಯನ್ನು ಹಾಡಿ ಹೊಗಳಿ ಟ್ವೀಟ್ ಮಾಡಿದವರು..!
ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ. ಇದನ್ನು ನಾವೆಲ್ಲ ಕಲಿಲೇಬೇಕು.
ಯಾಕೆ ಗೊತ್ತಾ ? ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳು ಮರುಸಂಸ್ಕರಣೆ ಮಾಡಲಾಗುವದಿಲ್ಲ. ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆ. ಸ್ಟ್ರಾ ಉಪಯೋಗ ಬಿಟ್ಹಾಕೋಣ ಎಂದು ತೇಜಸ್ವಿನಿ ಅನಂತ್ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ಭದ್ರಕೋಟೆ. ಇಲ್ಲಿ ಸೋಲಿಲ್ಲದ ಸರದಾರನಾಗಿ ಮೆರೆದಿದ್ದರು ಅನಂತ್ಕುಮಾರ್ ಅವರು. ಅವರ ಅಗಲಿಕೆಯಿಂದ ಒಂದರ್ಥದಲ್ಲಿ ಕ್ಷೇತ್ರ ಬಡವಾಗಿದೆ. ಅವರಿಲ್ಲದ ದಕ್ಷಿಣದಲ್ಲಿ ಅವರ ಪತ್ನಿ ತೇಜಸ್ವಿನಿ ಅವರನ್ನೇ ಬಿಜೆಪಿ ಕಣಕ್ಕಿಳಿಸಲು ಮುಂದಾಗಿತ್ತು. ರಾಜ್ಯ ನಾಯಕರು ತಮ್ಮ ಹೈಕಮಾಂಡ್ ಗೆ ಅವರ ಹೆಸರನ್ನೇ ಸೂಚಿಸಿತ್ತು. ಆದರೆ, ಹೈಕಮಾಂಡ್ ಯುವ ಮುಖಂಡ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿದೆ.
ನಿಖಿಲ್ ಗೌಡ ಸ್ಟ್ರಾ ಇಲ್ಲದೆ ಎಳನೀರು ಕುಡಿತಾನಂತೆ, ಕಾರಣ ಏನೇ ಇರಲಿ?,
ಇದನ್ನು ನಾವೆಲ್ಲ ಕಲಿಲೇಬೇಕು.
ಯಾಕೆ ಗೊತ್ತಾ ?
ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಸ್ಟ್ರಾ ಎಳನೀರು ಕುಡಿದು ಬಿಸಾಕ್ತಿವಿ. ಈ ಸ್ಟ್ರಾಗಳು ಮರುಸಂಸ್ಕರಣೆ ಮಾಡಲಾಗುವದಿಲ್ಲ. ನೀರಿಗೊ, ಕಾಡಿಗೊ, ಭೂಮಿಗೊ ಸೇರಿ ಮೂಕಪ್ರಾಣಿಗಳಿಗೆ ತೊಂದರೆ
ಸ್ಟ್ರಾ ಉಪಯೋಗ ಬಿಟ್ಹಾಕೋಣ.— Chowkidar Tejaswini AnanthKumar (@Tej_AnanthKumar) April 6, 2019