ದುಡ್ಡು ಖರ್ಚು ಮಾಡ್ದೇ ಎಲೆಕ್ಷನ್ ನಡೆಸೋಕೆ ಸಾಧ್ಯವೇ ಎಂದ ಕಾಂಗ್ರೆಸ್ ನ ಹಿರಿಯ ನಾಯಕ…!

Must read

ದುಡ್ಡು ಇಲ್ದೇ ಎಲೆಕ್ಷನ್ ಮಾಡೋಕೆ ಆಗಲ್ಲ. ಅದ್ಕೆ ದುಡ್ಡು ಕೇಳಿದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಓಪನ್ ಆಗಿ ಹೇಳಿದ್ದಾರೆ.
ಮಂಡ್ಯದ ಹಿರಿಯ ರಾಜಕೀಯ ಮುತ್ಸದ್ಧಿ ಜಿ. ಮಾದೇಗೌಡ್ರು ಮುಕ್ತವಾಗಿ ತಾನೇ ದುಡ್ಡು ಕೇಳಿದ್ದು ಎಂದು ಒಪ್ಪಿಕೊಂಡವರು.
ಜಿ.ಮಾದೇವಗೌಡ್ರು ಸಚಿವ ಸಿ.ಎಸ್ ಪುಟ್ಟರಾಜು ಬಳಿ ದುಡ್ಡಿಗೆ ಬೇಡಿಕೆ ಇಟ್ಟಿದ್ದರು. ಪ್ರಚಾರಕ್ಕೆ ಹಣ ಬೇಕು ಕಳುಹಿಸಿಕೊಡು ಎಂದಿದ್ದರು ಎಂಬ ಆಡಿಯೋ ಇಂದು ಬೆಳಗ್ಗೆ ವೈರಲ್ ಆಗಿತ್ತು.
ಆದರೆ, ಅದು ಮಾದೇಗೌಡ್ರದ್ದೇ ಸಂಭಾಷಣೆ ಎಂದು ಯಾರೂ ನೇರವಾಗಿ ಹೇಳಿರಲಿಲ್ಲ. ಕಾವೇರಿ ಹೋರಾಟಗಾರರು, ಹಿರಿಯರು ಎಂದು ಆ ಬಗ್ಗೆ ಯಾರೂ ಅಪ ಪ್ರಚಾರ ಮಾಡಿರಲಿಲ್ಲ.
ಆದರೆ, ಮಾದೇಗೌಡರು ತಾನೇ ಅಲ್ಲಿ ಮಾತನಾಡಿದ್ದು. ಪ್ರಚಾರಕ್ಕೆ ಬರುವವರು ನನ್ನ ಬಳಿ ದುಡ್ಡು ಕೇಳುತ್ತಾರೆ. ನಾನು ಎಲ್ಲಿಂದ ದುಡ್ ಕೊಡಲಿ.‌ಆದ್ದರಿಂದ ಜಿಲ್ಲಾ ಸಚಿವ ಪುಟ್ಟರಾಜು ಅವರ ಬಳಿ ದುಡ್ಡು ಕೇಳಿದೆ. ಅದರಲ್ಲಿ ತಪ್ಪೇನಿದೆ. ಎಲೆಕ್ಷನ್ ಮಾಡಲು ದುಡ್ ಬೇಕು. ಇಂಡಿಯಾ ದೇಶದಲ್ಲಿ ದುಡ್ಡು ಇಲ್ಲದೇ ಯಾರು ಚುನಾವಣೆ ಮಾಡುತ್ತಾರೆ.
ಖರ್ಚಿಗೆ ದುಡ್ಡು ಬೇಕು ಕೇಳಿದೆ‌‌ ಎಂದು ನೇರವಾಗಿ ಹೇಳಿದ್ದಾರೆ.

- Advertisement -spot_img

More articles

- Advertisement -spot_img

Latest article