ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಚಾಲೆಂಜಿಂಗ್ ಸ್ಟಾರ್ ಯಶ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಸುಮಲತಾ ಪರ ಅಖಾಡಕ್ಕೆ ಇಳಿದಿರುವ ಕನ್ನಡದ ಈ ಇಬ್ಬರು ಸ್ಟಾರ್ ನಟರು ಸುಮಲತಾ ಎದುರಾಳಿಗಳ ಕಂಗೆಣ್ಣಿಗೂ ಗುರಿಯಾಗಿದ್ದಾರೆ. ಆದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸುಮಲತಾ ಅವರ ಪರವಾಗಿ ಪ್ರಚಾರವನ್ನು ಮುಂದುವರೆಸಿದ್ದಾರೆ. ಇಂದು ಚಾಲೆಂಜೆಂಗ್ ಸ್ಟಾರ್ ದರ್ಶನ್ ತಿಥಿ ಸಿನಿಮಾ ಖ್ಯಾತಿಯ ನಟ ಗಡ್ಡಪ್ಪ ಅವರ ಮನೆಗೆ ಭೇಟಿ ನೀಡಿ ಸಮಲತಾ ಅವರ ಪರ ಮತಯಾಚಿಸಿದರು.
ದರ್ಶನ್ ಬಂದು ಹೋದ ಬಳಿಕ ಮಾತನಾಡಿದ ಗಡ್ಡಪ್ಪ, ತಾನು ಸುಮಲತಾ ಅವರಿಗೇ ಮತ ಹಾಕುವುದಾಗಿ ಹೇಳಿದ್ದೇನೆ. ಸುಮಲತಾ ಅವರಿಗೇ ಮತ ಹಾಕುತ್ತಾನೆ. ನಾನು ಕೂಡ ಸುಮಲತಾ ಅವರಿಗೇ ಮತಹಾಕುವಂತೆ ಹೇಳುತ್ತೇನೆ ಎಂದರು. ಅಂಬರೀಶ್ ಮಂಡ್ಯದ ಗಂಡು ಅವರ ಪತ್ನಿಯ ಪರವೇ ಮತಯಾಚಿಸುತ್ತೇನೆ ಎಂದು ತಿಳಿಸಿದರು.
ದರ್ಶನ್ ಬಂದು ಆರೋಗ್ಯವನ್ನೂ ವಿಚಾರಿಸಿದರು. ಹೋಗುವಾಗ ಆರೋಗ್ಯದ ಕಡೆ ಗಮನ ಇರಲಿ ಎಂದು ಹೇಳಿ ಹೋದರು. ಅವರ ಜೊತೆ ಬಹಳಾ ಜನ ಇದ್ದಿದ್ದರಿಂದ ಅವರಿಗೆ ಹೆಚ್ಚು ಮಾತಡಕ್ಕೆ ಆಗಿಲ್ಲ ಎಂದು ಹೇಳಿದರು.
ಸುಮಲತಾಗೆ ವೋಟ್ ಮಾಡಿ ಅಂದ ಚಾಲೆಂಜಿಂಗ್ ಸ್ಟಾರ್ಗೆ ಗಡ್ಡಪ್ಪ ಏನ್ ಹೇಳಿ ಕಳುಹಿಸಿದ್ರು ಗೊತ್ತಾ?
Date: