ನರೇಂದ್ರ ಮೋದಿಯವರು ಮತ್ತೆ ಪ್ರಧಾನ ಮಂತ್ರಿಯಾಗಬೇಕೆಂದು ತಾಲೂಕಿನ ಕುಂಟ ಚಿಕ್ಕನಹಳ್ಳಿ ಗ್ರಾಮದ ವಾಸಿ ರವಿ ಎಂಬ ಯುವಕ ಐದು ದಿನಗಳಿಂದ ಅನ್ನ ಆಹಾರ ಬಿಟ್ಟು ಗ್ರಾಮದ ಹೊರ ವಲಯದಲ್ಲಿನ ಬೆಟ್ಟದಲ್ಲಿ ದೀಕ್ಷೆಯಲ್ಲಿ ಕುಳಿತಿದ್ದಾನೆ.
ಈ ವಿಷಯ ತಿಳಿದು ಗ್ರಾಮಸ್ಥರು ಬೆಟ್ಟಕ್ಕೆ ತೆರಳಿ ರವಿಯನ್ನು ನೋಡಿಕೊಂಡು ಬರುತ್ತಿದ್ದಾರೆ, ಈ ವಿಷಯ ತಿಳದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಭರತ್ ರೆಡ್ಡಿ ಭೇಟಿ ನೀಡಿ ರವಿ ಕ್ಷೇಮವನ್ನು ವಿಚಾರಿಸಿದರು.
ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಾತ್ರ ಅರ್ಧ ಲೀಟರ್ ಹಾಲನ್ನು ಕುಡಿಯುತ್ತಿರುವುದಾಗಿ ತಿಳಿಸಿದ್ದಾನೆ. ಇದು ಕಳೆದ ಬಾರಿಯೂ ಇದೇ ರೀತಿ ದೀಕ್ಷೆ ತೊಟ್ಟಿದ್ದ ರವಿ ಮತ್ತೊಮ್ಮೆ ತಮ್ಮ ನೆಚ್ಚಿನ ನಾಯಕನಿಗಾಗಿ ದೀಕ್ಷೆ ತೊಟ್ಟಿದ್ದು , ಚುನಾವಣಾ ಫಲಿತಾಂಶ ಘೋಷಣೆವರೆಗೂ ಈ ವ್ರತ ಮುಂದುವರೆಯಲಿದೆ.