ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶದಾದ್ಯಂತ ಸಂಚರಿಸುತ್ತಿದ್ದಾರೆ.
ಶನಿವಾರದಂದು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ನರೇಂದ್ರ ಮೋದಿ ಅವರು ಪ್ರಚಾರ ಕಾರ್ಯ ನಡೆಸಿದ್ದು, ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಗೌರಿಗದ್ದೆ ದತ್ತಾತ್ರೇಯ ಪೀಠದ ವಿನಯ್ ಅವಧೂತರು ಭವಿಷ್ಯ ಕುತೂಹಲಕ್ಕೆ ಕಾರಣವಾಗಿದೆ.
ನರೇಂದ್ರ ಮೋದಿಯವರಿಗೆ ತಾವು ಪೂಜೆ ಮಾಡುತ್ತಿದ್ದ ಬಿಲ್ಲು ಬಾಣವನ್ನು ಕೊಡುಗೆಯಾಗಿ ನೀಡಿರುವ ವಿನಯ ಅವಧೂತರು, ಸಂಪೂರ್ಣ ಅನುಗ್ರಹ ನಿಮ್ಮದಾಗಲಿ ಎಂದಿದ್ದಾರೆ.ಅಲ್ಲದೇ, ರಾಮನ ಇಚ್ಛೆಯಂತೆ ಇನ್ನೂ ಎಂಟು ವರ್ಷಗಳ ಕಾಲ ಮೋದಿ ಪರ್ವ ನಡೆಯಲಿದೆ ಎಂದು ತಿಳಿಸಿದ್ದಾರೆ. ವಿನಯ ಅವಧೂತರು ಈ ಹಿಂದೆ ನುಡಿದಿದ್ದ ಹಲವು ಭವಿಷ್ಯಗಳು ನಿಜವಾಗಿದ್ದು, ಈಗಿನ ಭವಿಷ್ಯದ ಕುರಿತು ಕುತೂಹಲ ಮೂಡಿದೆ.