ಸಿಎಂ ಕುಮಾರಸ್ವಾಮಿಯವರು ನಟ ಯಶ್ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದು ಅದಕ್ಕೆ ಯಶ್ ಅವರು ತಿರುಗೇಟು ನೀಡಿದ್ದಾರೆ ,ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿರುವ ಯಶ್ ಅವರು ಕುಮಾರಸ್ವಾಮಿ ಅವರ ಮಾತಿಗೆ ಉತ್ತರ ನೀಡಿದ್ದು ಹೀಗೆ
ಯಾವನೋ ಅವನು ಯಶ್ ನಮ್ಮಂಥ ನಿರ್ಮಾಪಕರಿದ್ದರೇ ಇವರೆಲ್ಲಾ ನಟರಾಗೋದು. ನನಗೆ ನೋವಾಗಬಾರದು ಎಂದು ನಮ್ಮ ಕಾರ್ಯಕರ್ತರು ಸುಮ್ಮನಿದ್ದಾರೆ ಎಂದಿದ್ದರು.
ಸಿಎಂ ಹೇಳಿಕೆಗೆ ತಿರುಗೇಟು ನೀಡಿರುವ ಯಶ್ ‘ರಾಜ್ಯದ ಆರೂವರೆ ಕೋಟಿ ಜನರ ಮುಖ್ಯಮಂತ್ರಿಯಾಗಿ ಈ ರೀತಿ ಮಾತನಾಡುವುದು ಸರಿಯಾ? ನಾವು ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸುವುದೇ ತಪ್ಪಾ? ಕಾರ್ಯಕರ್ತರು ಸುಮ್ಮನಿದ್ದಾರೆ ಎಂದರೆ ಅರ್ಥವೇನು? ಯಾವುದು ಸರಿ ಯಾವುದು ತಪ್ಪು ಎಂದು ಜನರೇ ತೀರ್ಮಾನ ಮಾಡುತ್ತಾರೆ’ ಎಂದು ಯಶ್ ತಿರುಗೇಟು ನೀಡಿದ್ದಾರೆ.