ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ದರ್ಶನ್ ವಿರುದ್ಧ ಕಿಡಿ ಕಾರಿದ್ದರು. ಡಿ ಬಾಸ್ ಎಂದು ವ್ಯಂಗ್ಯ ಮಾಡಿದ್ದರು. ಆದರೆ ಆಗೆಲ್ಲಾ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸದ ದರ್ಶನ್ ಈಗ ಕೊನೆಯ ಸಮಾವೇಶದಲ್ಲಿ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.
‘ಕುಮಾರಸ್ವಾಮಿಗೆ ಧನ್ಯವಾದ ಸಲ್ಲಿಸಲು ಬಯಸುತ್ತೇನೆ. ಯಾಕೆಂದರೆ ಡಿ ಬಾಸ್ ಎಂದು ಕೆಲವರಿಗೆ ಮಾತ್ರ ಗೊತ್ತಿತ್ತೇನೋ. ಆದರೆ ಕುಮಾರಸ್ವಾಮಿಯವರು ಯಾವಾಗ ಆ ಹೆಸರು ಹೇಳಿದರೂ ಈಗ ಇಡೀ ರಾಜ್ಯದ ಜನರಿಗೆ ಡಿ ಬಾಸ್ ಎಂದರೆ ಯಾರು ಎಂದು ಗೊತ್ತಾಗಿದೆ’ ಎಂದು ದರ್ಶನ್ ಹೇಳುತ್ತಿದ್ದಂತೇ ನೆರೆದಿದ್ದ ಅಭಿಮಾನಿಗಳು ಶಿಳ್ಳೆ ಹೊಡೆದು ಖುಷಿ ವ್ಯಕ್ತಪಡಿಸಿದ್ದಾರೆ.