ಇಂದು ಮತದಾನ ನಡೆಯುತ್ತಿದ್ದು, ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಮತದಾನದ ದಿನದಂದು ಕೆಲವೆಡೆ ಮತದಾರರಿಗೆ ಹಣ ಹಂಚಿದ ಘಟನೆಗಳು ನಡೆದಿವೆ.
ಕೋಲಾರ ಲೋಕಸಭಾ ಕ್ಷೇತ್ರದ ಕೆ.ಜಿ.ಎಫ್. ನ ಸ್ವರ್ಣ ನಗರ ಮತಗಟ್ಟೆ ಸಂಖ್ಯೆ 22 ರ ಬಳಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮತದಾರರಿಗೆ ಹಣ ಹಂಚುತ್ತಿದ್ದ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಪುಣ್ಯಮೂರ್ತಿ ಎಂಬ ಈ ವ್ಯಕ್ತಿ ಬೈಕ್ ಸೀಟಿನಡಿ ಕಂತೆ ಕಂತೆ ನೋಟುಗಳನ್ನಿಟ್ಟುಕೊಂಡು ಮತದಾರರಿಗೆ ವಿತರಿಸುತ್ತಿದ್ದನೆನ್ನಲಾಗಿದ್ದು, ಬೈಕ್ ಹಾಗೂ ಹಣ ವಶಕ್ಕೆ ಪಡೆದಿರುವ ರಾಬರ್ಟ್ ಸನ್ ಪೇಟೆ ಠಾಣೆ ಪೊಲೀಸರು ಪುಣ್ಯಮೂರ್ತಿಯ ವಿಚಾರಣೆ ನಡೆಸುತ್ತಿದ್ದಾರೆ