2019 ರ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಭಾರೀ ಕುತೂಹಲವನ್ನು ಕೇಳಿಸುತ್ತಿದೆ ಈ ಬಾರಿ ಪ್ರಧಾನಿ ಮೋದಿ ಆಗ್ತಾರ ಅಥವಾ ರಾಹುಲ್ ಗಾಂಧಿ ಆಗ್ತಾರ ಎನ್ನುವ ಚರ್ಚೆ ಈಗಾಗಲೇ ಎಲ್ಲೆಡೆ ಪ್ರಾರಂಭವಾಗಿದೆ, ಇಂತಹ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಹೊಸ ವಿಚಾರವನ್ನು ಹಂಚಿಕೊಂಡಿದ್ದಾರೆ.
ಭಾರತದ ಹೆಮ್ಮೆಯ ಪೈಲೆಟ್ ಅಭಿನಂದನ್ ವರ್ಧಮಾನ ಅವರನ್ನು ಹೇಗೆ ಬಿಡಿಸಿಕೊಂಡು ಬರಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಮೊಟ್ಟ ಮೊದಲ ಬಾರಿಗೆ ಬಹಿರಂಗ ಸಭೆಯಲ್ಲಿ ಹೇಳಿಕೊಂಡಿದ್ದಾರೆ.
ಗುಜರಾತ್ ನಲ್ಲಿ ನಡೆದ ಇಂದಿನ ಸಮಾವೇಶದಲ್ಲಿ ಮಾತನಾಡಿದ ಮೋದಿ ನಮ್ಮ ಭಾರತೀಯ ಹೆಮ್ಮೆಯ ಸೈನಿಕ ಅಭಿ ನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು ಒಂದು ವೇಳೆ ಸುರಕ್ಷಿತವಾಗಿ ಒಪ್ಪಿಸದೇ ಇದ್ದಲ್ಲಿ ಆ ನಂತರ ನಡೆಯುವ ಘಟನೆಗಳೇ ಬೇರೆ ಅದನ್ನು ನೀವು ಎದುರಿಸಲು ಸಿದ್ಧರಾಗಿ.
ಒಂದು ವೇಳೆ ನಮ್ಮ ಪೈಲೆಟ್ ಅಭಿನಂದನ್ ಗೆ ಏನಾದರೂ ತೊಂದರೆ ಕೊಟ್ಟರೆ ಆನಂತರದ ಪರಿಸ್ಥಿತಿ ಹೇಗಿರುತ್ತೆ ಅಂದ್ರೆ ಇಡೀ ವಿಶ್ವಕ್ಕೆ ಪಾಕಿಸ್ತಾನದ ಈ ಪರಿಸ್ಥಿತಿಗೆ ಮೋದಿಯೇ ಕಾರಣ ಎಂದು ಹೇಳಿಕೊಂಡು ಓಡಾಡಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ನೀಡಿದ ಎಚ್ಚರಿಕೆಯ ಮಾತುಗಳನ್ನು ಮೋದಿ ಬಹಿರಂಗ ಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಮೋದಿ ತಮ್ಮ ಭಾಷಣದಲ್ಲಿ ಪ್ರಧಾನಿ ಹುದ್ದೆ ಇರುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನಾನು ಇರುವ ವರೆಗೂ ಉಗ್ರರ ವಿರುದ್ಧ ಹೋರಾಡುವುದರ ಮೂಲಕ ಕಠಿಣ ಕ್ರಮ ಕೈಗೊಳ್ಳುತ್ತೇನೆ, ಅದು ಯಾವ ಮಟ್ಟಿಗೆ ಅಂದ್ರೆ ಒಂದು ನಾನು ಜೀವಂತವಾಗಿರಬೇಕು ಇಲ್ಲವೇ ಉಗ್ರರು ಜೀವಂತವಾಗಿರಬೇಕು ಎನ್ನುವ ನಿರ್ಧಾರವನ್ನು ನಾನು ಈಗಾಗಲೇ ಕೈಗೊಂಡಿದ್ದೇನೆ ಎಂದು ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದರು