ಕೆಲಸ ಮಾಡುವ ಟೈಮ್ ನಲ್ಲಿ ನಿದ್ರೆ ಮಾಡಿದರೆ ಕೆಲಸ ಕಳೆದುಕೊಂಡು ಮನೇಲಿ ಕುಳಿತುಕೊಳ್ಳಬೇಕಾಗುತ್ತದೆ. ಆದರೆ, ನಾಸ ನಿದ್ರೆ ಮಾಡುವವರಿಗೆ ಲಕ್ಷ ಲಕ್ಷ ದುಡ್ಡು ಕೊಡುತ್ತದೆ..!
ಇದನ್ನು ನಂಬಲು ಕಷ್ಟವಾದರೂ ನಂಬಲೇ ಬೇಕು. ನಾಸಾ ಪ್ರಯೋಗವೊಂದಕ್ಕಾಗಿ ನಿದ್ರೆ ಮಾಡುವ ಜನರಿಗೆ ಲಕ್ಷ ಲಕ್ಷ ಸಂಬಳ ಕೊಡಲಿದೆ. ಅದಕ್ಕಾಗಿ ನಿದ್ರೆ ಮಾಡುವ ಜನರನ್ನು ಹುಡುಕುತ್ತಿದೆ.
ಅಧ್ಯಯನವೊಂದರ ಕಾರಣದಿಂದ ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ನಿದ್ರೆ ಮಾಡುವವರಿಗೆ 13 ಲಕ್ಷ ರೂ ಸಂಬಳ ನೀಡುವುದಾಗಿ ಘೋಷಿಸಿದೆ. ಸಂಶೋದನೆಗಾಗಿ ನಾಸಾ ಸಂಸ್ಥೆ ನಿದ್ರೆ ಮಾಡುವವರಿಗಾಗಿ ಹುಡುಕಾಟ ನಡೆಸಿದೆ. ಕೇವಲ 60 ದಿನ ನಿದ್ರೆ ಮಾಡಿದರೆ 13 ಲಕ್ಷ ರೂ ನಿಮ್ಮದಾಗುತ್ತದೆ..!
ನಾಸಾ ಸಂಸ್ಥೆ ಮಂಗಳ ಚಂದ್ರನಲ್ಲಿಗೆ ಮಾನವ ಸಹಿತ ಉಡಾವಣೆ ಯೋಜನೆ ಹಮ್ಮಿಕೊಂಡಿದೆ. ಗುರುತ್ವಾಕರ್ಷಣೆಯಲ್ಲಿದ ಬಾಹ್ಯಾಕಾಶ ವಾತಾವರಣದಲ್ಲಿ ನಿದ್ರೆ ಮತ್ತು ಇತರೆ ಆರೋಗ್ಯ ಸಂಬಂಧಿ ವ್ಯತ್ಯಾಸಗಳನ್ನು ಕಂಡು ಹಿಡಿಯಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಕೃತಕ ಗುರುತ್ವಾಕರ್ಷಣೆಯಲ್ಲಿ 2 ತಿಂಗಳ ಕಾಲ ನಿದ್ರೆ ಮಾಡುವ ಜನ ನಾಸಾಗೆ ಬೇಕಾಗಿದ್ದಾರಂತೆ. ಜರ್ಮನ್ ಏರೋಸ್ಪೇಸ್ ಸೆಂಟರ್ ನಲ್ಲಿ ಈ ಸಂಶೋಧನೆ ನಡೆಯಲಿದೆ. ನಾಸಾಗೆ 12 ಪುರುಷರು ಹಾಗೂ 12 ಮಹಿಳೆಯರ ಬೇಕಂತೆ ವಯಸ್ಸು 24ರಿಂದ 55 ವರ್ಷದೊಳಗಿರಬೇಕು ಎಂದು ವರದಿಯಾಗಿದೆ.
ನಿದ್ರೆ ಮಾಡಿದರೆ 13 ಲಕ್ಷ ರೂ ನಿಮ್ಮದಾಗುತ್ತದೆ..!
Date: