ಸಾವು ವಯಸ್ಸು ನೋಡಿ ಬರಲ್ಲ.. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಕಡಿಮೆ ವಯಸ್ಸಿನವರು ಹಾರ್ಟ್ ಅಟ್ಯಾಕ್ಗೆ ತುತ್ತಾಗುತ್ತಿದ್ದಾರೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಏನ್ ಗೊತ್ತಾ?
40 ವರ್ಷದ ಕಡಿಮೆ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗುವವರಲ್ಲಿ ಪುರುಷರೇ ಹೆಚ್ಚು ಎಂದು ತಿಳಿದು ಬಂದಿದೆ. ಅವರಲ್ಲಿ ಶೇ 45ರಷ್ಟು ಮಂದಗೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಇದಕ್ಕೆ ಕಾರಣ ಏನೆಂಬುದರನ್ನು ಸಂಶೋಧನೆಯೊಂದು ತಿಳಿಸಿದೆ.
ಧೂಮಪಾನ, ಅತೀಯಾದ ವ್ಯಾಯಾಮ, ರಕ್ತದೊತ್ತಡ, ಮಧುಮೇಹವೂ ಸೈಲೆಂಟ್ ಹಾರ್ಟ್ ಅಟ್ಯಾಕ್ಗೆ ಕಾರಣವಾಗುತ್ತದೆ.
ಇಲೇಟ್ರೊಗ್ರಾಮ್ ಎನ್ನುವ ಅಂಶ ಹೃದಯದ ಮಾಂಸಖಂಡಗಳ ಮೇಲೆ ಹೆಚ್ಚು ಪ್ರಭಾವ ಬೀರುವುದು ಈಹಾರ್ಟ್ ಆಟ್ಯಾಕ್ ಸಂಭವಿಸುತ್ತದೆ.ಹೃದಯಕ್ಕೆ ರಕ್ತ ಸಂಚಾರ ಕಡಿಮೆಯಾದರೆ ಅಥವಾ ಗಂಭೀರ ಗಾಯದಿಂದ ರಕ್ತ ಸ್ರಾವ ಹೆಚ್ಚಾದರೆ ಸೈಲೆಂಟ್ ಹಾರ್ಟ್ ಅಟ್ಯಾಕ್ ಆಗುತ್ತದೆ.
ಹೃದಯದ ಮಾಂಸಖಂಡದ ನೋವು, ತಲೆ ಸುತ್ತು, ಕಡಿಮೆ ನಿದ್ರೆ, ನಿದ್ದೆ ಬಾರದಿದ್ದರೆ, ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಮೊದಲು ಟ್ರೀಟ್ಮೆಂಟ್ ತೆಗೆದುಕೊಳ್ಳಿ. ಇಲ್ಲದಿದ್ದರೆ ಹೃದಯಾಘಾತ ಸಂಭವಿಸೋ ಸಾಧ್ಯತೆ ಇರುತ್ತದೆ.
ಚಿಕ್ಕ ವಯಸ್ಸಲ್ಲೇ ಹಾರ್ಟ್ ಅಟ್ಯಾಕ್ ಆಗೋದು ಏಕೆ? ಈ ಬಗ್ಗೆ ನಿಮಗೆಷ್ಟು ಗೊತ್ತು?
Date: