ಜೋಡೆತ್ತುಗಳಾಗಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪ್ರಚಾರಕ್ಕೆ ಬೆನ್ನೆಲುಬಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸುಮಲತಾ ಅಂಬರೀಶ್ ಅವರ ಸುಪುತ್ರ ಅಭಿಷೇಕ್ ಅಂಬರೀಶ್ ಅವರ ಸಿನಿ ಜರ್ನಿಗೂ ಸಾಥ್ ನೀಡುತ್ತಿದ್ದಾರೆ.
ಸುಮಲತಾ ಅವರ ಮನೆ ಮಕ್ಕಳಾಗಿ ನಾವು ಪ್ರಚಾರಕ್ಕೆ ಬಂದಿದ್ದೇವೆ. ಸ್ಟಾರ್ಗಳಾಗಿ ಅಲ್ಲ ಎಂದಿರುವ ದರ್ಶನ್ ಮತ್ತು ಯಶ್ ಅಭಿಗೆ ಅಣ್ಣಂದಿರು. ಅಭಿಯ ದೊಡ್ಡ ಅಣ್ಣ ದರ್ಶನ್ ಈಗಾಗಲೇ ಅಭಿಯ ಚೊಚ್ಚಲ ಸಿನಿಮಾಕ್ಕೆ ಸಾಥ್ ನೀಡಿದ್ದಾರೆ. ಅಮರ್ ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಯುಶ್ ಕೂಡ ಸಿನಿಮಾಕ್ಕೆ ಸಪೋರ್ಟ್ ಮಾಡಲಿದ್ದಾರೆ. ಯಾವ ರೀತಿ ಎನ್ನುವುದನ್ನು ಚಿತ್ರತಂಡ ಹೇಳಿಲ್ಲ. ಪ್ರಚಾರಕ್ಕೆ ಬೆನ್ನೆಲುಬಾಗಿ ನಿಲ್ಲುವುದರಲ್ಲಿ ಡೌಟಿಲ್ಲ.
ಇಷ್ಟು ದಿನ ಅಮ್ಮನ ಪರ ಎಲೆಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದ ಅಭಿಷೇಕ್ ಅಂಬರೀಶ್ ಈಗ ಮತ್ತೆ ತನ್ನ ಮೊದಲ ಸಿನಿಮಾದ ಕೆಲಸದಲ್ಲಿ ಬ್ಯುಸಿ ಆಗುತ್ತಿದ್ದಾರೆ. ಪ್ರಚಾರದ ಪ್ಲಾನ್ ಮಾಡುತ್ತಿದ್ದಾರೆ. ಅಭಿಗೆ ದರ್ಶನ್, ಯಶ್ ಕೂಡ ಹೆಗಲು ಕೊಟ್ಟು ನಿಲ್ಲಲಿದ್ದಾರೆ.
ದರ್ಶನ್ ಮತ್ತು ಯಶ್ ರೆಬೆಲ್ ಸ್ಟಾರ್ ಅಂಬರೀಶ್ ಅವರ ಫ್ಯಾಮಿಲಿಗೆ ಆಪ್ತರು. ಮನೆ ಮಕ್ಕಳಂತೆ ಇದ್ದಾರೆ. ಅಭಿಗೆ ಇಬ್ಬರೂ ಅಣ್ಣಂದಿರಾಗಿ ಸಪೋರ್ಟ್ ಮಾಡುತ್ತಿದ್ದಾರೆ. ಹೀಗಾಗಿ ಅಭಿಯ ಸಿನಿ ಪಯಣಕ್ಕೆ ಇಬ್ಬರು ಜೊತೆಯಾಗಿ ನಿಲ್ಲಲಿದ್ದಾರೆ.
ಅಭಿಷೇಕ್ ಸಿನಿ ಜರ್ನಿಗೂ ದರ್ಶನ್, ಯಶ್ ಸಾಥ್..!
Date: