ಆಕೆಗೆ ಎರಡೂ ಕೈಗಳಿಲ್ಲ… ಆದರೆ ಹ್ಯಾಂಡ್ರೈಟಿಂಗ್ ಕಾಂಪಿಟೇಶನ್ನಲ್ಲಿ ಫಸ್ಟ್.! ಅಚ್ಚರಿ ಎಂದು ಅನಿಸಿದರೂ ಇದನ್ನು ನಂಬಲೇ ಬೇಕಾದ ಸ್ಟೋರಿ. ಇದು ಕೈಗಳೇ ಇಲ್ಲದೇ ಜನಿಸಿರುವ ಬಾಲಕಿಯೊಬ್ಬಳ ಸಾಧನೆಯ ಕಥೆ. ಈಕೆ 10 ವರ್ಷದ ಬಾಲಕಿ. ಹೆಸರು ಸಾರಾ ಹೈನೆಸ್ಲೀ. ಅಮೇರಿಕಾದ ಮೇರಿಲ್ಯಾಂಡ್ನಲ್ಲಿರೊ ಸೆಂಟ್ ಜಾನ್ಸ್ ರೀಜನಲ್ ಕ್ಯಾಥೋಲಿಕ್ ಸ್ಕೂಲ್ನಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಗೆ ಎರಡೂ ಕೈಗಳಿಲ್ಲ. ಆದರೆ, ಹ್ಯಾಂಡ್ರೈಟಿಂಗ್ ಕಾಂಪಿಟೇಶನ್ನಲ್ಲಿ ಇವಳನ್ನು ಹಿಂದಿಕ್ಕಲು ಯಾರಿಗೂ ಸಾಧ್ಯವಾಗಿಲ್ಲ. ಕರ್ಸಿವ್ ರೈಟಿಂಗ್ನಲ್ಲಿ 2019ರ ಮ್ಯಾಕ್ಸಿಮ್ ಅವಾರ್ಡ್ ಅನ್ನು ಈ ಪೋರಿ ಗೆದ್ದು ಬೀಗಿದ್ದಾಳೆ. ಪ್ರತಿ ವರ್ಷ ಪ್ರಿಂಟ್ ರೈಟಿಂಗ್ ಹಾಗೂ ಸ್ಕ್ರಿಪ್ಟ್ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. ಈ ಬಾರಿ ಸಾರಾ ಪ್ರಶಸ್ತಿ ಪಡೆದಿದ್ದಾಳೆ.
ಸಾರಾಗೆ ಕೈಗಳಿಲ್ಲದಿದ್ದರೂ ಆಕೆ ಕೃತಕ ಕೈಗಳನ್ನ ಎಂದಿಗೂ ಬಳಸದೇ ಇರುವುದು ವಿಶೇಷ. ಕೆಲವೊಮ್ಮೆ ಕತ್ತರಿಯಿಂದ ಪೇಪರ್ ಕಟ್ ಮಾಡಬೇಕಾದಾಗ ಅಥವಾ ಇತರೆ ಕೆಲಸಗಳನ್ನ ಮಾಡುವಾಗ ಅವಳಿಗೆ ಸುಲಭವಾಗಲಿ ಎಂದು ಯಾವುದಾದ್ರೂ ಸಾಧನವನ್ನ ನೀಡಿದ್ರೆ, ಸಹಾಯ ಮಾಡಲು ಹೋದ್ರೆ ಆಕೆ ಅದನ್ನು ನಯವಾಗಿ ನಿರಾಕರಿಸುತ್ತಾಳೆ,..! ಯಾಕಂದರೆ ಕೈಗಳಿಲ್ಲದೇ ಕೆಲಸ ಮಾಡಬಲ್ಲೆ ಎನ್ನುವುದು ಅವಳ ಕಾನ್ಫಿಡೆನ್ಸ್ಎಂದು ತಿಳಿಸಿದ್ದಾರೆ ಆಕೆಯ ತಾಯಿ ಕ್ಯಾಥ್ರಿನ್ ಅವರು. ಸಾರಾ ಇಂಗ್ಲಿಷ್ ಹಾಗೂ ಮ್ಯಾಂಡರಿನ್ ಭಾಷೆಗಳಲ್ಲಿ ಬರೆಯಬಲ್ಲಳಂತೆ.
ಕೈಗಳಿಲ್ಲದ ಬಾಲಕಿ ಹ್ಯಾಂಡ್ರೈಟಿಂಗ್ ಕಾಂಪಿಟೇಶನ್ನಲ್ಲಿ ಫಸ್ಟ್..!
Date: