ಬೆಂಗಳೂರಿನಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ RCB ತಂಡ ಮೂರನೇ ಗೆಲುವನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಪಂದ್ಯದ ಕೊನೆಯ ಎಸೆತ ವನ್ನು ಎಂ ಎಸ್ ಧೋನಿ ಮಿಸ್ ಮಾಡಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ ಎಂದು ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಗೆಲುವನ್ನು ತಂಡದ ನಾಯಕ ಎಂ ಎಸ್ ಧೋನಿ ಕೊನೆಯ ಹಂತದಲ್ಲಿ ಕೈ ಚೆಲ್ಲಿದರು ಧೋನಿ ಏನಾದರೂ ಕೊನೆಯ ಎಸೆತದಲ್ಲಿ 2 ರನ್ ಪಡೆದಿದ್ದರೆ ಚೆನ್ನೈ ತಂಡ ಆ ಪಂದ್ಯವನ್ನು ಗೆಲ್ಲುತ್ತಿತ್ತು ಅಥವಾ 2 ರನ್ ಬದಲು 1 ರನ್ ಬಂದಿದ್ದರೂ ಸಹ ಪಂದ್ಯ ಸೂಪರ್ ಓವರ್ ನತ್ತ ತಿರುಗುತ್ತಿತ್ತು.
ನಾವು ನಿಜವಾಗಿಯೂ ಎಂ ಎಸ್ ಧೋನಿ ಕೊನೆಯ ಎಸೆತದಲ್ಲಿ ಆಫ್ ಸೈಡ್ ಅಥವಾ ಲೆಗ್ ಸೈಡ್ ಹೊಡೆಯೋ ಮೂಲಕ 2 ರನ್ ಗಳಿಸುತ್ತಾರೆ ಎಂಬುದನ್ನು ನಿರೀಕ್ಷೆ ಮಾಡಿದ್ದೆವು ಎಂದು ಪಟೇಲ್ ಪಂದ್ಯದ ಬಳಿಕ ಹೇಳಿಕೊಂಡಿದ್ದಾರೆ.