ಬಾಲಿವುಡ್ ಸೂಪರ್ ಸ್ಟಾರ್ ಶ್ರೀದೇವಿ ನಿಧನರಾಗಿ ವರ್ಷ ಕಳೆಯುತ್ತಾ ಬಂತು. ಇದೀಗ ಅವರ ಸಾವು ಮತ್ತೆ ಸುದ್ದಿಯಲ್ಲಿದೆ.
ಶ್ರೀದೇವಿ ಸಾವಷ್ಟೇ ಅಲ್ಲಾ ಇತ್ತೀಚೆಗೆ ಸಾವನ್ನಪ್ಪಿದ ತಮಿಳು ನಟ ಜಿ.ಕೆ. ರಿತೇಶ್ ಸಾವಿಗೂ ದಕ್ಷಿಣ ಭಾರತದ ನಟಿಯೊಬ್ಬರು ಕಾರಣವಂತೆ..! ಅಷ್ಟಕ್ಕೂ ಆ ನಟಿ ಯಾರು ಅಂದ್ರಾ… ರಾಜಕುಮಾರ, ಆರೆಂಜ್ ಚಿತ್ರಗಳಲ್ಲಿ ನಟಿಸಿದ್ದ ಪ್ರಿಯಾ ಆನಂದ್.
ಇಂತಹ ಪ್ರಶ್ನೆ ಮೂಡಲು ಕಾರಣ ವ್ಯಕ್ತಿಯೊಬ್ಬರು ಮಾಡಿದ ಟ್ವೀಟ್. ಆ ಟ್ವೀಟ್‍ನಲ್ಲಿ ಶ್ರೀದೇವಿ ನಟಿಸಿದ್ದ ಇಂಗ್ಲಿಷ್ ವಿಂಗ್ಲಿಷ್ ಚಿತ್ರದಲ್ಲಿ ಪ್ರಿಯಾ ಆನಂದ್ ನಟಿಸಿದ್ರು. ಹೀಗಾಗಿ ಶ್ರೀದೇವಿ ನಿಧನರಾದ್ರು. ಎಲ್‍ಕೆಜಿ ಚಿತ್ರದಲ್ಲಿ ಜಿ.ಕೆ. ರಿತೇಶ್ ಜೊತೆ ಪ್ರಿಯಾ ನಟಿಸಿದ್ದರಿಂದ ರಿತೇಶ್ ಸಹ ಇತ್ತೀಚೆಗೆ ವಿಧಿವಶರಾದ್ರು.ಹೀಗಾಗಿ ಅಪಶಕುನವಿದ್ದಂತೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವಿಟ್‍ಗೆ ರೀಟ್ವೀಟ್ ಮಾಡಿರುವ ಪ್ರಿಯಾ ಆನಂದ್, ನಿಮ್ಮಂಥವರ ಪ್ರಶ್ನೆಗಳಿಗೆ ಉತ್ತರಿಸಲ್ಲ. ಆದ್ರೆ ಇದು ಸೂಕ್ಷ್ಮ ವಿಚಾರವಾಗಿದ್ದು, ನಾನು ಮಾತನಾಡುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಲು ಈ ರೀತಿ ಕಮಂಟ್ ಮಾಡಿದ್ರೆ, ಅದಕ್ಕೆ ಉತ್ತರಿಸಿ ನಿಮ್ಮನ್ನು ಕೆಳ ಮಟ್ಟಕ್ಕೆ ತರುವವಳು ನಾನಲ್ಲ ಎಂದಿದ್ದಾರೆ. ಇನ್ನು ಅನಾಮಿಕ ವ್ಯಕ್ತಿ ಮಾಡಿರುವ ಟ್ವೀಟ್‍ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.