ಅಪ್ಪ-ಮಗನ ಸಿನಿಮಾ ಒಟ್ಟಿಗೇ ಬೆಳ್ಳಿ ಪರದೆ ಮೇಲೆ..!
ಮುಂದಿನ ತಿಂಗಳ ಕೊನೆಯಲ್ಲಿ ಅಂಬಿ ಅಭಿಮಾನಿಗಳಿಗೆ ನಾಡ ಹಬ್ಬವಿದ್ದಂತೆ. ಆದ್ರೆ ಈ ವರ್ಷ ಅಭಿಮಾನಿಗಳು ದುಖಕರದಿಂದ ಆಚರಿಸುತ್ತಿದ್ದಾರೆ. ಯಾಕಂದ್ರೆ ಕಲಿಯುಗದ ಕರ್ಣ, ರೆಬಲ್ ಸ್ಟಾರ್ ಅಂಬರೀಶ್ ಇಲ್ಲದೆ ಮೊದಲನೆ ಬರ್ತ್ಡೇ ಇದು. ಆಂದು ಅಂಬಿ ಅಭಿಮಾನಿಗಳಿಗೆ ಡಬಲ್ ಧಮಾಕ ಸರ್ಪ್ರೈಸ್ ಸಿಗಲಿದೆ. ಎಸ್. ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ ‘ಅಮರ್’ ಬೆಳ್ಳಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಮುಂದಿನ ತಿಂಗಳು ಮೇ 31ರಂದು ಅಂಬರೀಶ್ ಹುಟ್ಟುಹಬ್ಬದ ಸಮಯದಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೆ ಹಾಡುಗಳು ಮತ್ತು ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ‘ಅಮರ್’ ನೋಡಲು ಚಿತ್ರಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದು ಒಂದಾದ್ರೆ ಮತ್ತೊಂದು ವಿಶೇಷತೆ ಅಂದ್ರೆ ಅಭಿಷೇಕ್ ಅಭಿನಯದ ‘ಅಮರ್’ ಸಿನಿಮಾ ರಿಲೀಸ್ ದಿನವೇ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ಕೂಡ ತೆರೆ ಮೇಲೆ ಬರಲಿದೆ. ಹೌದು, ರೆಬೆಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಅಂಬರೀಶ್ ಅಭಿನಯದ ಬ್ಲಾಕ್ ಬಸ್ಟರ್ ‘ಅಂತ’ ಸಿನಿಮಾ ರಿ-ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ.
1981ರಲ್ಲಿ ತೆರೆಕಂಡ ಅಂಬರೀಶ್ ಅಭಿನಯದ ಅಂತ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಈ ಚಿತ್ರ ಈಗ 38 ವರ್ಷಗಳ ನಂತ್ರ ಮತ್ತೆ ಬೆಳ್ಳಿ ಪರದೆ ಮೇಲೆ ನೋಡುವ ಭಾಗ್ಯ ಸಿಗಲಿದೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳಿದ್ದ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ರು. ಸಿನಿಮಾದಲ್ಲಿನ ಕನ್ವರ್ಲಾಲ್ ಪಾತ್ರ ಇವತ್ತಿಗೂ ಫೇಮಸ್. ಜಿ.ಕೆ. ವೆಂಕಟೇಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದ ಈ ಸಿನಿಮಾವನ್ನ ಪರಿಮಳ ಆರ್ಟ್ ಮೂಲಕ ಹೆಚ್.ಎನ್. ಮಾರುತಿ ಹಾಗೂ ವೇಣುಗೋಪಾಲ್ ನಿರ್ಮಿಸಿದ್ದರು.
ಇದೀಗ 1981 ರಲ್ಲಿ ತೆರೆಕಂಡಿದ್ದ ಈ ಚಿತ್ರ ಈಗ ಡಿಜಿಟಲ್ ಫಾರ್ಮಾಟ್ನಲ್ಲಿ ರಿಲೀಸ್ ಆಗಲು ರೆಡಿಯಾಗ್ತಾ ಇದೆ. ಅಂಬಿ ಹುಟ್ಟುಹಬ್ಬದ ಪ್ರಯುಕ್ತ ಹೊಸ ರೂಪದ ಅಂತ`ಚಿತ್ರವನ್ನ, ರಾಜ್ಯಾದ್ಯಂತ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗುತ್ತೆ ಅಂತಾ ಹೇಳಲಾಗ್ತಿದೆ. ಒಟ್ಟಾರೆಯಾಗಿ ಮಗನ ಮೊದಲ ಸಿನಿಮಾ ಜೊತೆಗೆ ಹೊಸ ರೂಪದ ಅಂತ ಸಿನಿಮಾ ತೆರೆ ಮೇಲೆ ರಾರಾಜಿಸಲಿದೆ.