ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನನ್ನದೊಂದು ಇಚ್ಛೆ ಇದೆ ಅದನ್ನು ಈಡೇರಿಸುತ್ತೀರಾ ಎಂದು ಕೇಳಿಕೊಂಡರು.
ಈ ಬಾರಿ ಪುರುಷರಿಗಿಂತ ಶೇ.5 ರಷ್ಟು ಹೆಚ್ಚಿನ ಮಹಿಳೆಯರು ಮತದಾನ ಮಾಡಬೇಕು ಇದು ನನ್ನ ಆಸೆ ಈ ಆಸೆಯನ್ನು ಈಡೇರಿಸುತ್ತೀರಾ ಎಂದು ಮೋದಿ ಸಭೆಯಲ್ಲಿ ಕೇಳಿಕೊಂಡಿದ್ದಾರೆ.
ಇಡೀ ದೇಶವೇ ಮೋದಿ ಸರ್ಕಾರ ಮತ್ತೊಮ್ಮೆ ಬರಬೇಕು ಎಂದು ಇಚ್ಚಿಸುತ್ತಿದೆ, ಚುನಾವಣೆಯನ್ನು ಗೆಲ್ಲಲು ಬೇಕಾಗಿರುವುದು ಜನರೇ ಹೊರತು ಹಣವಲ್ಲ..!
ಚುನಾವಣಾ ಪ್ರಚಾರಕ್ಕೆ ಹಣ ಬೇಕಾಗಿಲ್ಲ, ಜನರ ಜೊತೆ ಬೆರೆತು ಅವರ ಕಷ್ಟಗಳಿಗೆ ಸ್ಪಂದಿಸೊದರೇ ಸಾಕು, ನಮ್ಮ ಕಾರ್ಯಕರ್ತರು ಧೃತಿಗೆಡುವುದು, ಕೋಪದಲ್ಲಿ ಕಿತ್ತಾಡಿಕೊಳ್ಳುವುದು, ಬಡಿದಾಡುವುದು ಬೇಡ ಎಂದು ಮನವಿಯನ್ನು ಸಹ ಮಾಡಿಕೊಂಡಿದ್ದಾರೆ.
ಜೊತೆಗೆ ಮೋದಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವುದು ಮುಖ್ಯವಲ್ಲ. ನಮ್ಮ ಕಾರ್ಯಕರ್ತರ ಗೆಲುವು ಮುಖ್ಯ ಎಂದು ಹೇಳಿಕೆ ನೀಡುವುದರ ಮೂಲಕ ಅಚ್ಚರಿಯನ್ನು ಮೂಡಿಸಿದ್ದಾರೆ.