ಶಿವರಾಜ್ ಕುಮಾರ್, ಪತ್ರಿಕಾಗೋಷ್ಠಿಯೊಂದರಲ್ಲಿ ಯಾರ ಪರವಾಗಿಯೂ ಮತ ಕೇಳಲ್ಲ. ಮಧು ಬಂಗಾರಪ್ಪ ಒಳ್ಳೆಯ ಮನುಷ್ಯ.
ಅವನು ಸೂಕ್ತ ಎನಿಸಿದರೆ ಜನ ವೋಟ್ ಮಾಡ್ತಾರೆ ಎಂದು ಹಿಂದೊಮ್ಮೆ ಹೇಳಿದ್ದರು. ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ಶಿವಣ್ಣ ಹೀಗೆ ಹೇಳಿದ್ದಕ್ಕೆ
ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ರಾಜಕೀಯಕ್ಕೆ ಬರುವುದಾದರೆ ಕವಚ ಕಳಚಿಟ್ಟು ಬರಲಿ ಎಂದು ಲೇವಡಿ ಮಾಡಿದ್ದರು. ಇದು ಶಿವಣ್ಣ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಇದೀಗ ಅಭಿಮಾನಿಗಳು ಕುಮಾರ್ ಬಂಗಾರಪ್ಪ ಕೂಡಲೇ ಕ್ಷಮೆ ಕೇಳದಿದ್ದರೆ ಪ್ರತಿಭಟನೆಯ ಬಿಸಿ ಎದುರಿಸಬೇಕಾಗುತ್ತದೆ ಎಂದು ಅಭಿಯಾನವನ್ನೇ ಆರಂಭಿಸಿದ್ದಾರೆ.