ಕಳೆದ ಒಂದು ತಿಂಗಳಿನಿಂದ ಲೋಕಸಭಾ ಚುನಾವಣೆ ಅಖಾಡದಲ್ಲಿ ಬ್ಯುಸಿಯಾಗಿದ್ದ ಶಾಸಕರು ಚುನಾವಣೆ ಮುಗಿದ ನಂತರ ರಿಲ್ಯಾಕ್ಸ್ ಮೊರೆ ಹೋಗಿದ್ದಾರೆ. ಆದರೆ ಇಲ್ಲೊಬ್ಬ ಶಾಸಕರು ರಾಜಕೀಯ ವೇಷ ಕಳಚಿಟ್ಟು ನಾಟಕದಲ್ಲಿ ಕೃಷ್ಣನ ಪಾತ್ರದಲ್ಲಿ ಮಿಂಚಿದ್ದಾರೆ.
ಬಂಗಾರಪೇಟೆ ಕ್ಷೇತ್ರದ ಬೂದಿಕೋಟೆಯಲ್ಲಿ ಕರಗ ಪ್ರಯುಕ್ತ ಸಾಮ್ರಾಟ್ ಸುಯೋಧನ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. ಈ ನಾಟಕದಲ್ಲಿ ಶಾಸಕ ನಾರಾಯಣ ಸ್ವಾಮಿ ಅವರು ಕೃಷ್ಣನ ವೇಷಧಾರಿಯಾಗಿ ನಾಟಕದಲ್ಲಿ ನಟಿಸುವ ಮೂಲಕ ಸಾರ್ವಜನಿಕರಿಂದ ಭೇಷ್ಎನಿಸಿಕೊಂಡಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಅವರು ಕೃಷ್ಣನ ಪಾತ್ರಧಾರಿಯಾಗಿ ಮಿಂಚುವ ಮೂಲಕ ರಾಜಕೀಯಕ್ಕೂ ಸೈ , ನಾಟಕಕ್ಕೂ ಸೈ ಎನಿಸಿಕೊಂಡಿದ್ದಾರೆ.