RCB ಇಂದು ಗೆದ್ದರೆ ಪ್ಲೇ ಆಫ್ ಕಡೆಗೆ..! ಸೋತರೆ ಮನೆ ಕಡೆಗೆ..!?

Date:

2019ರ ಐಪಿಎಲ್ ಆರಂಭದಲ್ಲಿ ಸಾಲು ಸಾಲಾಗಿ ಆರು ಪಂದ್ಯಗಳನ್ನು ಸೋತರು ಸಹ ಆರ್ಸಿಬಿ ತಂಡದ ಮೇಲೆ ಅಭಿಮಾನಿಗಳಿಗೆ ಇರುವ ಪ್ರೀತಿ ಮತ್ತು ಅಭಿಮಾನ ಮಾತ್ರ ಕಮ್ಮಿ ಆಗಿಲ್ಲ ಅದಕ್ಕೆ ತಕ್ಕಂತೆ..

ಕಳೆದ ಐದು ಪಂದ್ಯಗಳಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿರೊ ಆರ್ಸಿಬಿ ಕೂಡ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದು ಹ್ಯಾಟ್ರಿಕ್ ಸಾಧನೆಯೊಂದಿಗೆ ಅಭಿಮಾನಿಗಳನ್ನು ಖುಷಿ ಪಡಿಸುವ ಕೆಲಸವನ್ನು ಮಾಡಿದೆ.

ಚೆನ್ನೈಹಾಗೂ ಪಂಜಾಬ್ ವಿರುದ್ಧದ ಪಂದ್ಯವನ್ನು ರೋಚಕವಾಗಿ ಗೆದ್ದ ಆರ್ ಸಿ ಬಿ ಇಂದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಎದುರಿಸಲಿದೆ.

ಈಗಾಗಲೇ ಅಂಕಪಟ್ಟಿಯಲ್ಲಿ ಕೊನೆಯಲ್ಲಿರುವ ಆರ್ಸಿಬಿ ಪ್ಲೇ ಆಫ್ ಕನಸನ್ನ ಇನ್ನೂ ಜೀವಂತವಾಗಿಯೇ ಇರಿಸಿಕೊಂಡಿದೆ.
ಆಡಿರುವ 11 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ತಂಡ ಇಂದು ನಡೆಯುವ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ..

ಅಲ್ಲದೆ ಇಂದಿನ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ಗೆ ಪ್ರವೇಶ ಪಡೆಯುವ ಕನಸು ಜೀವಂತವಾಗಿ ಇರಲಿದೆ, ಒಂದು ವೇಳೆ ಇಂದಿನ ಪಂದ್ಯವನ್ನು ಸೋತರೆ ಮುಂಬರುವ ಎರಡು ಪಂದ್ಯಗಳು ಆರ್ಸಿಬಿ ಪಾಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಾಗುತ್ತದೆ ಜೊತೆಗೆ 2019ರ ಐಪಿಎಲ್ ಟೂರ್ನಿಯಿಂದ ಆರ್ ಸಿ ಬಿ ಮೊದಲನೆಯ ತಂಡವಾಗಿ ಹೊರ ನಡೆಯಬೇಕಾಗುತ್ತದೆ.


ಇನ್ನು ತಂಡಗಳ ಕಡೆ ಗಮನಹರಿಸುವುದಾದರೆ ನಾಯಕ ವಿರಾಟ್ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದಾರೆ ಹಾಗಾಗಿ ಈ ಪಂದ್ಯದಲ್ಲಿ ಬೆಂಗಳೂರು ತಂಡ ಗೆಲುವನ್ನು ಪಡೆಯಬೇಕಾದರೆ ವಿರಾಟ್ ಮತ್ತೆ ಫಾರ್ಮ್ ಗೆ ಬರಬೇಕು..

ಆಟಗಾರ ಪಾರ್ಥಿವ್ ಪಟೇಲ್ ಮತ್ತು ಎ ಬಿ ಡಿವಿಲಿಯರ್ಸ್ ಎಂದಿನಂತೆ ತಮ್ಮ ಫಾರ್ಮ್ ಮುಂದುವರಿಸಬೇಕು ಜೊತೆಗೆ ಸ್ಟೇನ್ ಅನುಪಸ್ಥಿತಿಯಲ್ಲಿ ಆರ್ಸಿಬಿ ಬೌಲರ್ ಗಳು ಉತ್ತಮ ಪ್ರದರ್ಶನವನ್ನು ನೀಡಬೇಕು.


ಮತ್ತೊಂದು ಕಡೆ ಆತಿಥೇಯ ದೆಹಲಿ ಕ್ಯಾಪಿಟಲ್ ಈ ಬಾರಿಯ ಐಪಿಎಲ್ ನಲ್ಲಿ ಹಿಂದೆಂದಿಗಿಂತಲೂ ಉತ್ತಮ ಪ್ರದರ್ಶನವನ್ನು ನೀಡಿದೆ ಹಾಡಿರುವ 11 ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಚೆನ್ನೈ ನಂತರದ ಸ್ಥಾನವನ್ನು ಅಂದರೆ ಎರಡನೇ ಸ್ಥಾನವನ್ನು ಅಲಂಕರಿಸಿಕೊಂಡಿದೆ.

ದೆಹಲಿ ತಂಡದ ಬ್ಯಾಟಿಂಗ್ ಬಲವಾಗಿರುವ ಶಿಖರ್ ಧವನ್, ನಾಯಕ ಶ್ರೇಯಸ್ ಅಯ್ಯರ್, ಪೃಥ್ವಿ ಶಾ, ರಿಷಬ್ ಪಂತ್ ಇವರನ್ನ ಕಟ್ಟಿಹಾಕುವಲ್ಲಿ ಆರ್ಸಿಬಿ ಬೌಲರ್ಗಳು ಯಶಸ್ವಿಯಾದರೆ ಇಂದಿನ ಪಂದ್ಯವನ್ನು ಗೆಲ್ಲಬಹುದಾಗಿದೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...