ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಕೈಲಾದ ಒಳ್ಳೆಯ ಕೆಲಸಗಳನ್ನು ಮಾಡ್ತಾರೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಾರೆ. ಆದರೆ, ಈ ಬಗ್ಗೆ ಯಾರಿಗೂ ಗೊತ್ತಾಗದಂತೆಯೂ ನೋಡಿಕೊಳ್ತಾರೆ. ಸ್ಟಾರ್ ನಟ ಆಗಿರುವುದರಿಂದ ಈ ಸಂಗತಿಗಳು ಆಗಾಗಾ ಸುದ್ದಿ ಆಗುತ್ತವೆ. ಆದರೆ, ಎಷ್ಟೋ ವಿಷಯಗಳು ಸುದ್ದಿ ಆಗುವುದಿಲ್ಲ. ಹಾಗೆಯೇ ದರ್ಶನ್ ಗೆ ಪ್ರಾಣಿಗಳೆಂದರೆ ಅಚ್ಚು ಮೆಚ್ಚು..ತಮ್ಮದೇ ಫಾರ್ಮ್ ಹೌಸ್ ಇಟ್ಟುಕೊಂಡಿರುಚ ಡಿ.ಬಾಸ್ ಸಮಯ ಸಿಕ್ಕಾಗ ತಾವೇ ಹೋಗಿ ಹಾಲು ಕರೆದು ಸಂಭ್ರಮಿಸುವುದೂ ಉಂಟು. ಈಗ ಈ ಹಾಲು ಕರೆಯುವ ಪಾಠವನ್ನು ತಮ್ಮ ಮಗ ವಿನೀಶ್ ಗೂ ಹೇಳಿಕೊಟ್ಟಿದ್ದಾರೆ.
ಅಪ್ಪ ದರ್ಶನ್ ಅವರಂತೆ ಮಗ ವಿನೀಶ್ ಗೂ ಪ್ರಾಣಿ-ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ರಜಾ ದಿನಗಳಲ್ಲಿ ವಿನೀಶ್ ಹೆಚ್ಚು ಕಾಲ ಸ್ಪೆಂಡ್ ಮಾಡುವುದು ಫಾರ್ಮ್ ಹೌಸ್ ನಲ್ಲೇ. ಸ್ಟಾರ್ ಗಳ ಮಕ್ಕಳು ಆಚೆ ಬರುವುದೇ ಕಷ್ಟ ಎನ್ನುವ ಈ ಕಾಲ ಘಟ್ಟದಲ್ಲಿ ದರ್ಶನ್ ತಮ್ಮ ಮಗನನ್ನು ಬೆಳೆಸಿತ್ತಿರುವ ಪರಿ ಎಲ್ಲರಿಗೂ ಇಷ್ಟವಾಗುತ್ತೆ…ಜೊತೆಗೆ ಅಚ್ಚರಿಯೂ ಆಗುತ್ತದೆ.
ದರ್ಶನ್ ಮತ್ತು ವಿನೇಶ್ ತಮ್ಮ ಫಾರ್ಮ್ ಹೌಸ್ ನಲ್ಲಿ ಹಾಲು ಕರೆದಿದ್ದಾರೆ.
ದರ್ಶನ್ ಅವರ ಈ ಸರಳತೆ ಇಷ್ಟವಾಗುತ್ತದೆ ಅಲ್ಲವೇ?
ದರ್ಶನ್ ಚಿಕ್ಕಂದಿನಿಂದಲೂ ಹಸುಗಳೊಂದಿಗೆ ಕಾಲ ಕಳೆಯುತ್ತಾ ಬೆಳೆದು ಬಂದವರು. ಇಂದು ಸ್ಟಾರ್ ನಟರಾಗಿ ಮನೆ ಮಾತಾಗಿದ್ದರೂ ಹಸುಗಳ ಜೊತೆ ಕಾಲ ಕಳೆಯುವುದನ್ನು ಮರೆತಿಲ್ಲ. ಚಿಕ್ಕಂದಿನಲ್ಲಿ ಹಾಲು ಕರೆಯುತ್ತಿದ್ದ ದರ್ಶನ್ ಇಂದೂ ಹಾಲು ಕರೆಯುತ್ತಾರೆ. ಪ್ರತಿ ವರ್ಷ ಹಾಲು ಕರೆಯುವ ಸ್ಪರ್ಧೆ ಏರ್ಪಿಸುವ ಮೂಲಕ ರೈತಾಪಿ ವರ್ಗಕ್ಕೆ ಉತ್ತೇಜನ ಮಾಡುವ ದರ್ಶನ್ ತಮ್ಮ ಮಗ ವಿನೀಶ್ ಗೆ ಮಾತ್ರವಲ್ಲದೆ ಅಕ್ಕನ ಮಗ ಚಂದ್ರು ಅವರಿಗೂ ಹಾಲು ಕರೆಯುವುದನ್ನು ಹೇಳಿಕೊಟ್ಟಿದ್ದಾರೆ.
ಮಗನಿಗೆ ದರ್ಶನ್ ಮಾಡಿದ ಹೊಸ ಪಾಠ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತೆ?ಕಾರಣ ಏನಂದ್ರೆ?
Date: