ಚಿತ್ರದುರ್ಗ ತಾಲ್ಲೂಕಿನ ವಡ್ಡರಪಾಳ್ಳ ಗ್ರಾಮದ ಹತ್ತಿರದ ವಿ ಪಾಳ್ಯ ಗ್ರಾಮದಲ್ಲಿನ ಪ್ರವೀಣ್ ಎಂಬುವರು ಚಿತ್ರದುರ್ಗದಲ್ಲಿನ ಕರ್ನಾಟಕ ಬ್ಯಾಂಕ್ ನಿಂದ 10 ಲಕ್ಷ ಸಾಲ ಮಾಡಿದ್ದರು. ಹೀಗೆ ಪಡೆದ ಸಾಲದಿಂದ ಅಡಿಕೆ ತೋಟಕ್ಕೆ ಈ ಮೊದಲಿನ ಬೋರ್ ಫೇರ್ ಆಗಿದ್ದರಿಂದ, ಮತ್ತೊಂದು ಬೋರ್ ವೆಲ್ ಕೊರೆದಿದ್ದಾರೆ.
ರೈತ ಪ್ರವೀಣ್ ಅವರು ಕೊರೆಸಿದ ಮತ್ತೊಂದು ಬೋರ್ ವೆಲ್ ಪುನಹ ಫೇಲ್ ಆಗಿದ್ದರಿಂದ, ಕೈಗೆ ಬಂದ ಅಡಿಕೆ ಬೆಳೆಗೆ ನೀರಿಲ್ಲದೇ ಒಣಗಿ ಹೋಗಿದೆ. ಇದರಿಂದಾಗಿ ಬ್ಯಾಂಕ್ ಸಾಲ ತೀರಿಸಲಾಗದೇ, ಸಾಲದ ಸುಳಿಯಲ್ಲಿ ರೈತ ಪ್ರವೀಣ್ ಸಿಲುಕಿದ್ದಾರೆ
ಈ ನಡುವೆ ಸಾಲ ತೀರಿಸದ ಹಿನ್ನಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ನಿಂದ ಪ್ರವೀಣ್ ಅವರಿಗೆ ಒತ್ತಡ ಏರಲಾಗಿದೆ. ಜೊತೆಗೆ ಸಾಲ ಮರು ಪಾವತಿ ಮಾಡುವಂತೆ ಕಿರುಕುಳ ನೀಡಲಾಗಿದೆ. ಇದರಿಂದ ಬೇಸತ್ತ 40 ವರ್ಷದ ರೈತ ಪ್ರವೀಣ್ ಇಂದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದಾಗಿ ಕುಟುಂಬಕ್ಕೆ ಆಸರೆಯಾಗಿದ್ದ ಪ್ರವೀಣ್ ಇಲ್ಲದೇ ಕುಟುಂಬ ಶೋಕಸಾಗರದಲ್ಲಿ ಮುಳುಗಿದ್ದಾರೆ. ಈ ಸಂಬಂಧ ಭೀಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.