ರಾಜ್ಯದಲ್ಲಿನ ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ರಾಜ್ಯದ ಮಟ್ಟಿಗೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಸಾಕಷ್ಟು ಅಚ್ಚರಿಯ ಫಲಿತಾಂಶಗಳು ಹೊರಬಿದ್ದಿದ್ದು ಹಾಸನ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಲಭಿಸಿದೆ.
ಅಲ್ಲದೆ ಸರ್ಕಾರದ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳ ಸಾಧನೆಯು ಕಳೆದ ಬಾರಿಗಿಂತ ಈ ಬಾರಿ ಉತ್ತಮವಾಗಿದೆ ಇನ್ನೊಂದು ಆಶ್ಚರ್ಯಕರ ವಿಷಯವೆಂದರೆ ಯಾವುದೇ ಒಂದು ಸರ್ಕಾರಿ ಶಾಲೆಗಳಲ್ಲೂ ಸಹ ಶೂನ್ಯ ಫಲಿತಾಂಶ ಬಾರದೆ ಇರುವುದು ಖುಷಿಯನ್ನು ತಿಳಿಸಿದೆ ಸರ್ಕಾರಿ ಶಾಲೆಗಳೆಂದರೆ ಕೀಳಾಗಿ ಕಾಣುತ್ತಿದ್ದರು ಬಾಯನ್ನ ಈ ಬಾರಿಯ ಫಲಿತಾಂಶ ಮುಚ್ಚಿಸಿದೆ.
ಕಳೆದ ಬಾರಿಗಿಂತ ಈ ಬಾರಿ ಒಟ್ಟಾರೆ ಫಲಿತಾಂಶದಲ್ಲಿ 1.8% ರಷ್ಟು ಫಲಿತಾಂಶ ಹೆಚ್ಚಾಗಿದೆ ಇದು ಕರ್ನಾಟಕ ಶಿಕ್ಷಣ ಸಂಸ್ಥೆಗಳಿಗೆ ಹೆಮ್ಮೆ ಪಡುವಂತಹ ವಿಚಾರವಾಗಿದ್ದು ಶೈಕ್ಷಣಿಕವಾಗಿ ಇನ್ನಷ್ಟು ಸಾಧನೆಯನ್ನು ಮಾಡಲು ರಾಜ್ಯಕ್ಕೆ ಪ್ರೇರೇಪಣೆ ಸಿಕ್ಕಂತಾಗಿದೆ.
ಈ ಬಾರಿ ಒಟ್ಟು 8,26,468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇದರಲ್ಲಿ 6,08,336 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇನ್ನು ಶಾಲಾವಾರು ಫಲಿತಾಂಶವನ್ನು ನೋಡುವುದಾದರೆ 5202 ಸರ್ಕಾರಿ ಶಾಲೆಗಳಲ್ಲಿ ಪರೀಕ್ಷೆ ಬರೆದ 2,78, 544 ವಿದ್ಯಾರ್ಥಿಗಳಲ್ಲಿ 2,16,844 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಇನ್ನು 3243 ಅನುದಾನಿತ ಶಾಲೆಗಳಲ್ಲಿ ಪರೀಕ್ಷೆ ಬರೆದ 2,00,888 ವಿದ್ಯಾರ್ಥಿಗಳಲ್ಲಿ 1,55,111 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಜೊತೆಗೆ 6002 ಅನುದಾನರಹಿತ ಶಾಲೆಗಳಲ್ಲಿ ಪರೀಕ್ಷೆ ಬರೆದ 2,59,137 ವಿದ್ಯಾರ್ಥಿಗಳಲ್ಲಿ 2,14,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ, ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಾಲಕಿಯರೆ ಮೇಲುಗೈ ಸಾಧಿಸಿದ್ದಾರೆ.
ಈ ಬಾರಿ ಅನುದಾನಿತ ಶಾಲೆಗಳ ಪೈಕಿ 130 ಶಾಲೆಗಳಲ್ಲಿ 100% ಫಲಿತಾಂಶ ಹಾಗೂ 9 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ, ಜೊತೆಗೆ 903 ಅನುದಾನರಹಿತ ಶಾಲೆಗಳಲ್ಲಿ 100% ಫಲಿತಾಂಶ ಬಂದಿದ್ದು 37 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ,
ವಿಶೇಷವೆಂದರೆ ಈ ಬಾರಿ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿಲ್ಲ ಜೊತೆಗೆ ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ.
ಆನೇಕಲ್ ತಾಲೂಕಿನ ಅತ್ತಿಬೆಲೆಯ ಸೇಂಟ್ ಫಿಲೋಮಿನಾ ಇಂಗ್ಲೀಷ್ ಹೈ ಸ್ಕೂಲ್ ನಲ್ಲಿ ಓದುತ್ತಿರುವ ವಿದ್ಯಾರ್ಥಿನಿ
ಸೃಜನಾ..
ಹಾಗೂ ಕುಮುಟಾದ ಸಿ ವಿ ಎಸ್ ಕೆ ಶಾಲೆಯಲ್ಲಿ ಓದುತ್ತಿರುವ
ನಾಗಾಂಜಲಿ ನಾಯ್ಕ..
ಎಂಬ ವಿದ್ಯಾರ್ಥಿನಿಯರು 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.