ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಅಂತಹ ಬೆಳವಣಿಗೆಯೊಂದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನಡೆದಿದೆ.
ಅಪಘಾತಕ್ಕೆ ಒಳಗಾಗಿ ಕೋಮಾ ಸ್ಥಿತಿಗೆ ಜಾರಿದ್ದ ಮಹಿಳೆಯೊಬ್ಬರಿಗೆ 27ವರ್ಷಗಳ ಬಳಿಕ ಪ್ರಜ್ಞೆ ಬಂದಿದ್ದು ವೈದ್ಯರೇ ನಿಬ್ಬೆರಗಾಗಿದ್ದಾರೆ.
ಆಕೆಯ ಹೆಸರು ಮುನೀರಾ ಅಬ್ದುಲ್ಲಾ. 1991ರಲ್ಲಿ ತನ್ನ ಮಗ ಓಮರ್ ವೆಬೈರ್ ನನ್ನ ಶಾಲೆಯಿಂದ ಕರೆದುಕೊಂಡು ಬರುವಾಗ ಆ್ಯಕ್ಸಿಡೆಂಟ್ ಆಗಿತ್ತು. ಆ ಆ್ಯಕ್ಸಿಡೆಂಟ್ ನಲ್ಲಿ ಅವರ ಮಗ ಬಚಾವ್ ಆಗಿದ್ದ. ಆದರೆ, ಮುನೀರಾ ತಲೆಗೆ ಗಂಭೀರವಾದ ಪೆಟ್ಟಾಗಿತ್ತು. ಅವರು ಅಂದಿನಿಂದ ಕೋಮಾಕ್ಕೆ ಜಾರಿದ್ದರು. ಅವರು ಮೊದಲಿನಂತೆ ಆಗುವುದು ಕಷ್ಟ ಸಾಧ್ಯ ಎಂದು ವೈದ್ಯರು ಹೇಳಿದ್ದರು. ಆದರೆ, ಈಗ 27 ವರ್ಷಗಳ ಬಳಿಕ ಅವರಿಗೆ ಎಚ್ಚರವಾಗಿದೆ. ಅವರು ಮಾತನಾಡುತ್ತಿದ್ದಾರೆ. ಅವರ ಮಗ ಓಮರ್ ಅವರಿಗೆ ಅಂದು 4-5 ವರ್ಷ…ಅವರಿಗೆ 32 ವರ್ಷ…ಇಂದು ಮಗ ಓಮರ್ ಗೆ 32..!
ಆ್ಯಕ್ಸಿಡೆಂಟ್ ಆದಾಗ ನಾನು ಚಿಕ್ಕವನು..ಅಮ್ಮ ನನ್ನನ್ನು ಕರೆದುಕೊಂಡು ಹೋಗಲು ಶಾಲೆಗೆ ಬಂದಿದ್ದರು. ಆಗ ಆ್ಯಕ್ಸಿಡೆಂಟ್ ಆಯಿತು…ಆ್ಯಂಬುಲೆನ್ಸ್ ಗೆ ಕೂಡಲೇ ಕಾಲ್ ಮಾಡು ಅಂದು ಮೊಬೈಲ್ ಇರಲಿಲ್ಲ. ಆಗ ಹಲವಾರು ಗಂಟೆಗಳಕಾಲ ಅಮ್ಮ ಹಾಗೆಯೇ ಇದ್ದರು ಎಂದು ಓಮರ್ ಸ್ಮರಿಸಿಕೊಳ್ಳುತ್ತಿದ್ದಾರೆ.
27 ವರ್ಷಗಳ ನಂತರ ಆಕೆಗೆ ಬಂತು ಪ್ರಜ್ಞೆ.. ಅಂದು ಅವರಿಗೆ 32 , ಇಂದು ಮಗನಿಗೆ 32 ವರ್ಷ..!
Date: