ಇದು ಮನಕಲಕುವ ಸ್ಟೋರಿ.. ದೂರದಲ್ಲೆಲ್ಲೋ ನಡೆದ ಘಟನೆ ಅಲ್ಲ.. ನಮ್ಮ ತುಮಕೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ…
ಆ ಪುಟ್ಟ ಬಾಲಕನ ಹೆಸರು ಪುನೀತ್ಕುಮಾರ್ ಎಂದು. ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ ಈ 8 ಪೋರ ತನ್ನ ತಂದೆ ಶಿವಕುಮಾರ್ ಅವರ ಜೊತೆಯಲ್ಲಿ ಟಾಟಾ ಎಸ್ ವಾಹನದಲ್ಲಿ ಹೋಗುತ್ತಿದ್ದ. ಆ ಸಂದರ್ಭದಲ್ಲಿ ಶಿವಕುಮಾರ್ ಅವರಿಗೆ ದಿಢೀರ್ ಹೃದಯಾಘಾತವಾಗಿದೆ. ಅಪ್ಪನಿಗೆ ಹೃದಯಾಘಾತವಾಗಿದೆ, ವಾಹನ ಓಡಿಸಲು ಆಗುವುದಿಲ್ಲ ಎಂದು ತಿಳಿದು, ಆ್ಯಕ್ಸಿಡೆಂಟ್ ಆಗಬಹುದು ಎಂಬುದನ್ನು ಅರಿತು ಸಮಯಪ್ರಜ್ಞೆ ಮೆರೆದಿದ್ದಾನೆ.
ತಂದೆ ಶಿವಕುಮಾರ್ ಹೃದಯಾಘಾತದಿಂದ ಕುಸಿದ ಕೂಡಲೇ ಚಲಿಸುತ್ತಿದ್ದ ಟಾಟಾ ಎಸ್ ವಾಹನವನ್ನು ರಸ್ತೆ ಪಕ್ಕಕ್ಕೆ ತಿರುಗಿಸಿದ್ದಾನೆ. ಈತನ ಸಮಯಪ್ರಜ್ಞೆಗೆ ಎಲ್ಲಾಕಡೆ ಮೆಚ್ಚುಗೆ ವ್ಯಕ್ತವಾಗಿದೆ.
ತಂದೆಗೆ ಏನೋ ಆಗಿದೆ ಎಂದು ಆಘಾತವಾದರೂ ಆ ಸಮಯದಲ್ಲೂ ಬಾಲಕ ಅಪಘಾತವಾಗಬಹುದು ಎಂದು ಎಚ್ಚರಿಕೆವಹಿಸಿ ಆ ಕ್ಷಣಕ್ಕೇನೆ ವಾಹನವನ್ನು ರಸ್ತೆ ಬದಿ ಸರಿಸಿದ್ದಾನೆ ಇದರ ಬಗ್ಗೆ ಪ್ರಶಂಸಿಬೇಕು, ಆದರೆ, ಆತ ಪಟ್ಟ ನೋವು ಮಾತ್ರ ಯಾವ ಶತ್ರುಗೂ ಬೇಡ..!
ಈ ಸ್ಟೋರಿ ಓದಿದ್ರೆ ಬಾಲಕನಿಗೆ ಸೆಲ್ಯೂಟ್ ಹೊಡೀತೀರಾ..? 8ರ ಪೋರನದ್ದು ಇದು ಸಾಹಸವೇ..!
Date: