ಇದು ಚಿನ್ನಪ್ರಿಯರು ಈಗಲೇ ಓದ ಬೇಕಾದ ನ್ಯೂಸ್.ತಡಮಾಡಿ ಓದಿದ್ರೆ ನೋ ಯೂಸ್ ..ಯಾಕಂದರೆ..ಇದು ಸಿಹಿ ಸುದ್ದಿ..ತಡಮಾಡಿದರೆ ಈ ಬಗ್ಗೆ ಕಹಿ ಸುದ್ದಿಯೂ ಬರಬಹುದಲ್ಲವೇ?
ಕಳೆದ ಮಾರ್ಚ್ ನಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಈಗ ಮತ್ತೆ ಇಳಿಕೆ ಆಗಿದೆ.
ಅಕ್ಷಯ ತೃತೀಯದ ಮುನ್ನದಿನ ಸ್ವೀಟ್ ನ್ಯೂಸ್ ಬಂದಿದೆ.ದೆಹಲಿಯಲ್ಲಿ ಚಿನ್ನದ ದರ 10 ಗ್ರಾಮ್ ಗೆ 250 ರೂ ಕಡಿಮೆ ಆಗಿದೆ. ಇದರಿಂದ ಚಿನ್ನದ ದರ ಈಗ 32, 620ರೂಗಳಾಗಿವೆ.
ಚಿನ್ನ ಮಾತ್ರವಲ್ಲದೆ ಬೆಳ್ಳಿಯ ದರ ಸಹ ಕಡಿಮೆ ಆಗಿದೆ. 825 ರೂ ಕಡಿಮೆಯಾಗಿದ್ದು, 37, 700 ರೂ ಆಗಿದೆ..
ಚಿನ್ನದ ಆಮದು ಮೇಲಿನ ಸುಂಕವನ್ನು 10 ಗ್ರಾಂ ಗೆ 5 ಡಾಲರ್ ನಷ್ಟು ಇಳಿಕೆ ಮಾಡಿರುವುದರಿಂದ ಬೆಲೆ ಇಳಿಕೆ ಆಗಿದೆ ಎಂದು ತಿಳಿದುಬಂದಿದೆ.
ಇದು ಹೇಳಿ ಕೇಳಿ ಮದ್ವೆ ಸೀಸನ್. ಚಿನ್ನದ ದರ ಕಡಿಮೆ ಆಗಿರುವುದು ಅನುಕೂಲವಾಗಿದೆ.