No menu items!
11.1 C
Munich
Wednesday, April 29, 2026

ರಾಜಕೀಯ ಒತ್ತಡದ ಮಧ್ಯೆ ದೇವೇಗೌಡ್ರು ಆಗ್ತಿದ್ದಾರೆ ಕೂಲ್ ಕೂಲ್ !? ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತಾ ?

Must read

ರಾಜ್ಯ ರಾಜಕೀಯ ವಲಯದಲ್ಲಿ ಮೈತ್ರಿಗಾಲದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ. ಸರ್ಕಾರದ ಅಳಿವು ಉಳಿವಿನ ಬಗ್ಗೆ ಉಭಯ ನಾಯಕರು ಮಾತನಾಡುತ್ತಿದ್ದಾರೆ. ಇದೆಲ್ಲದರ ನಡುವೆ  ಜೆಡಿಎಸ್​ ವರಿಷ್ಠ ಹೆಚ್​.ಡಿ ದೇವೇಗೌಡ ಅವರು ಮಾತ್ರಾ ಸಮುದ್ರದ ತೀರದ ರೆಸಾರ್ಟ್ ಒಂದರಲ್ಲಿ  ಕೂಲ್ ಆಗಿ ರೆಸ್ಟ್​ ಮಾಡುತ್ತಿದ್ದಾರೆ.

ಆದರೆ ಆ ರೆಸಾರ್ಟ್ ಬಳಿ ಯಾವುದೇ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ .  ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ದೇವೇಗೌಡ, ಮೈತ್ರಿ ಅಭ್ಯರ್ಥಿಗಳ ಪರ ನಿರಂತರ ಪ್ರಚಾರ ನಡೆಸಿದ್ದರು. ಹೀಗಾಗಿ ಮಾಜಿ ಪ್ರಧಾನಿ ದೇವೇಗೌಡ ಅವರು  ಸದ್ಯ ರೆಸ್ಟ್​ ಮೂಡ್​ನಲ್ಲಿದ್ದಾರೆ.

ಇದೇ ರೆಸಾರ್ಟ್ ಗೆ  ಕುಮಾರಸ್ವಾಮಿ ಹಾಗೂ ಕೆಲ ಸಚಿವರ ಜೊತೆ ವಿಶ್ರಾಂತಿಗೆ ತೆರಳಿದ್ರು.ಆಗಾ ತಾವು ಅಲ್ಲಿದ್ದುಕೊಂಡೇ ಪುತ್ರ, ಸಿಎಂ ಕುಮಾರಸ್ವಾಮಿಗೆ ರಾಜಕೀಯದ ಸಲಹೆ ನೀಡುತ್ತಿದ್ದರು ಎನ್ನಲಾಗಿದೆ. ಸರ್ಕಾರ ಉಳಿಸಿಕೊಳ್ಳುವ ಹಾಗೂ ವಿರೋಧಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವ ಕುರಿತು ಸಲಹೆ ನೀಡುತ್ತಿದ್ದಾರಂತೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article