ದೇಶದ 543 ಕ್ಷೇತ್ರಗಳಿಗೆ ಲೋಕಸಭಾ ಚುನಾವಣೆ ನಡೆಯುತ್ತಿದೆ. ಒಂದಿಷ್ಟು ಕಡೆಗಳಲ್ಲಿ ಮತದಾನ ಆಗಿದೆ. ಮತ್ತೊಂದಿಷ್ಟು ಕಡೆಗಳಲ್ಲಿ ಮತದಾನ ಆಗಬೇಕಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಮತದಾನ ಮುಗಿದಿದೆ. ಎಲ್ಲಾ ಕಡೆಗಿಂತಲೂ ಹೆಚ್ಚು ಕುತೂಹಲ ಮನೆ ಮಾಡಿರುವ ಕ್ಷೇತ್ರ ಎಂದರೆ ಅದು ಮಂಡ್ಯ.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರ ನಡುವಿನ ಹೋರಾಟ ಅಲ್ಲಿದೆ. ನಿಖಿಲ್ ಮೈತ್ರಿ ಒಮ್ಮತ ಅಭ್ಯರ್ಥಿಯಾಗಿದ್ದರೆ, ಸುಮಲತಾ ಪಕ್ಷೇತರರಾಗಿ ಸ್ವಾಭಿಮಾನದ ರಣಕಹಳೆ ಊದಿದ್ದಾರೆ. ಸುಮಲತಾ ಪರ ಮನೆ ಮಕ್ಕಂತೆ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಮಾಡಿದ್ದರು.
ಈಗ ಸುಮಲತಾ, ನಿಖಿಲ್ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಪ್ರಶ್ನೆ, ಕುತೂಹಲ. ಮಕ್ಕಳೂ ಕೂಡ ಈ ಬಗ್ಗೆ ಮಾತನಾಡುತ್ತಿದ್ದಾರೆ. ಆಟದಲ್ಲೂ ಈ ವಿಚಾರದ್ದೇ ಗಮ್ಮತ್ತು. ಮೈಮೇಲೆ ದೇವರು ಬರುವ ಆಟ ಆಡಿದ ಮಕ್ಕಳ ವಿಡಿಯೋ ಈಗ ವೈರಲ್ ಆಗುತ್ತಿದೆ. ಸುಮಲತಾ ಬಂದಾಳ, ನಿಖಿಲ್ ಬರ್ತಾನಾ ಅಂತ ದೇವರು ಬರುವ ಹುಡುಗನ ಪಾತ್ರದಾರಿಯಲ್ಲಿ ಒಬ್ಬ ಕೇಳುತ್ತಾನೆ, ಆಗ ಗಣ ಬಂದ ಹುಡುಗ ಅದೇ ಸ್ಟೈಲಲ್ಲಿ ಸುಮಲತಾನೇ ಬರುವುದು ಎಂದು ಕಿರುಚುತ್ತಾನೆ. ಈ ವಿಡಿಯೋ ವೈರಲ್ ಆಗಿದ್ದು, ಮಕ್ಕಳ ಆಟದ ಭವಿಷ್ಯ ನಿಜವಾಗುತ್ತದೆಯೇ ನೋಡಬೇಕು,
ಮಂಡ್ಯದಲ್ಲಿ ಗೆಲುವು ಯಾರಿಗೆ ಎಂದು ಮಕ್ಕಳು ಭವಿಷ್ಯ ನುಡಿದಿದ್ದಾರೆ..!
Date: